ಬೀದರನ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಸಭೆ ನಡೆಸಲಾಯಿತು.ರಾಜ್ಯ ಕಾರ್ಯದರ್ಶಿಗಳಾದ ಸ್ಟಾರ್ ಕಂಪೇನರ್ ದತ್ತು ಸೂರ್ಯವಂಶಿ ಹಾಗೂ ಲೋಕಸಭಾ ಅಭ್ಯರ್ಥಿಗಳಾದ ಪುಟ್ಟರಾಜ ಹನುಮಂತಪ್ಪ ನಂದೆ ಇವರು ಪತ್ರಿಕಾಗೋಷ್ಠಿ ನಡೆಸಿ ಬೀದರ್ ಲೋಕಸಭಾ ಜನತೆಗೆ ಬಹುಜನ ಸಮಾಜ ಪಾರ್ಟಿ ಅಂದರೆ ಆನೆ ಚಿನ್ನೆಗೆ ಮತ ಚಲಾಯಿಸಲು ಕೋರಿದರು.ಈ ಸಂದರ್ಭದಲ್ಲಿ ಲೋಕಸಭಾ ಮತ ಕ್ಷೇತ್ರದ ಅಭ್ಯರ್ಥಿಗಳಾದ ಶ್ರೀ ಪುಟ್ಟರಾಜ ಹನುಮಂತಪ್ಪ ನಂದೆ ರವರು ಪ್ರಚಂಡ ಬಹುಮತ ದಲ್ಲಿ ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ತಿಳಿಸಿದರು.ಬಹುಜನ ಸಮಾಜ ಪಾರ್ಟಿಯ ಸ್ಟಾರ್ ಕ್ಯಾಂಪೆನರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀದತ್ತು ಸೂರ್ಯವಂಶಿ, ಕಲ್ಯಾಣ ಕರ್ನಾಟಕ ಕ್ರಿಶ್ಚಿಯನ್ ಬಾಹೀಚಾರ ಅಧ್ಯಕ್ಷರಾದ ಶ್ರೀ ಯೋಹಾನ್ ಡಿಸೋಜಾ,ಬಹುಜನ ಸಮಾಜ ಪಕ್ಷ ಬೀದರ್ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ.ಜಿ.ಅಸ್ಕರ್ ಹಾಗೂ ಇ.ಬಿ.ಸಿ.ಐ ಚರ್ಚ್ ಸಂಸ್ಥಾಪಕರಾದ ರೆವೆರೆಂಡ್ ಶ್ರೀ ಶಾದ್ರಕ್ ಪಿ ಸೀತಲಗೇರ,ಪ್ರೇಯರ್ ಪವರ್ ಸಭಾ ಪಾಲಕರಾದ ಶ್ರೀಸ್ವಾಮಿದಾಸ್,ಮತ್ತು ಬಹುಜನ ಸಮಾಜ ಪಕ್ಷ ಕಾರ್ಯಕರ್ತರಾದ ಶ್ರೀಜೈವಂತ್ ಸಾಗರ್ ಹಾಗೂ ಪಕ್ಷದ ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ರೋಹನ್