ಕಲಬುರಗಿ:ಬಿಸಿಲುನಾಡು ಕಲಬುರಗಿಯಲ್ಲಿ ಮಧ್ಯಾಹ್ನದ ಸಮಯದಲ್ಲಿ ವಾಹನ ಸವಾರರು ಹೈರಾಣಾಗುತ್ತಿದ್ದು,ಫ್ರೀ ಟ್ರಾಫಿಕ್ ಸಿಗ್ನಲ್ ಗೆ ಒತ್ತಡ ಹೇರುತ್ತಿದ್ದಾರೆ.ಹೀಗಾಗಿ ಈ ಬೇಸಿಗೆ ಸಮಯದಲ್ಲಿ ಮಧ್ಯಾಹ್ನದ ವೇಳೆ ಟ್ರಾಫಿಕ್ ಸಿಗ್ನಲ್ ಮುಕ್ತ ಮಾಡಬೇಕು,ಇಲ್ಲವೇ ಹಸಿರು ಶೆಡ್ ನೆಟ್ ಹಾಕಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ವಾಹನ ಸವಾರರು,ಪಾದಚಾರಿಗಳು ಹೈರಾಣಾಗುತ್ತಿದ್ದು ಇದನ್ನು ಬೇಗ ಸರಿಪಡಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ.ನಗರದಲ್ಲಿ ಎಲ್ಲಿ ನೋಡಿದರೂ ಕೊಡೆ ಹಿಡಿದುಕೊಂಡು ಓಡಾಡುವ ಜನ ಕಾಣಸಿಗುತ್ತಿದ್ದಾರೆ.ಜನ ಮಳೆಗಾಲದಲ್ಲಿ ಕೊಡೆ ಹಿಡಿದು ಓಡಾಡುವುದು ಸಹಜ ಇಲ್ಲಿ ಬೇಸಿಗೆ ಸಮಯದಲ್ಲೂ ಕಾಣುತ್ತಿರುವುದು ಕಂಡುಬರುತ್ತಿದೆ.ಕಳೆದ ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಬಿಸಿಲಿರುವುದರಿಂದ ಬಿಸಿಲಿಗೆ ಜನ ಬೇಸತ್ತಿದ್ದಾರೆ.
-ಅಪ್ಪಾರಾಯ ಬಡಿಗೇರ