ಇಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಡವಿ-ಹೊಸೂರು ಗ್ರಾಮದ ಹೊಲದಲ್ಲಿ ಯುವ ಪ್ರೇಮಿಗಳು ಮರಕ್ಕೆ ನೇಣು ಹಾಕಿಕೊಂಡ ಘಟನೆ ಜರುಗಿದೆ.ಮೃತಪಟ್ಟವರು ಅದೇ ಗ್ರಾಮದ ವಿಶ್ವನಾಥ್ 32 ವರ್ಷ ವಯಸ್ಸು ಹಾಗೂ ಲಕ್ಷ್ಮೀ ಎಂಬ 17 ವರ್ಷದ ಮೃತ ಯುವತಿಯಾಗಿದ್ದಾಳೆ ಹಾಗೂ ಪರಸ್ಪರ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದರು.ಇಬ್ಬರು ಯುವ ಪ್ರೇಮಿಗಳ ಸಂಬಂಧಿಕರ ರೋಧನೆ ತುಂಬಾ ಆಳವಾಗಿತ್ತು,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಂಬಂಧಪಟ್ಟ ಮಾಹಿತಿ ದಾಖಲೆಗಳನ್ನು ತಿಳಿದುಕೊಂಡು ಮುಂದಿನ ಕಾರ್ಯಕ್ಕೆ ಮುಂದಾದರು.
ವರದಿ:ರಾಖೇಶ್ ಬೂದಿಹಾಳ