ಬಾಗಲಕೋಟೆ ಗ್ರಾಮೀಣ ಹಾಗೂ ಶಹರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಅಂಗವಾಗಿ ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಬೃಹತ್ ಸಮಾವೇಶ ಜರುಗಿತು.
ಈ ಸಮಾವೇಶದಲ್ಲಿ ಮಾನ್ಯ ಸಚಿವರಾದ ಶ್ರೀ ಆರ್ ಬಿ ತಿಮ್ಮಾಪುರ,ಶಾಸಕರಾದ ಶ್ರೀ ಜಿ ಟಿ ಪಾಟೀಲ್,ಶ್ರೀ ಎಚ್ ವೈ ಮೇಟಿ,ಶ್ರೀ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಸಚಿವರಾದ ಶ್ರೀ ಎಸ್ ಆರ್ ಪಾಟೀಲ್, ಶ್ರೀ ಶಿವನಗೌಡ ಪಾಟೀಲ,ಶ್ರೀ ಆನಂದ್ ನ್ಯಾಮಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ನಂಜಯ್ಯಮಠ,ಮುಖಂಡರಾದ ಶ್ರೀ ಸಿದ್ದು ಕೊಣ್ಣೂರ, ಶ್ರೀ ರಕ್ಷಿತಾ ಈಟಿ,ಲೋಕಸಭಾ ಅಭ್ಯರ್ಥಿ ಶ್ರೀ ಸಂಯುಕ್ತ ಎಸ್ ಪಾಟೀಲ್,ಬ್ಲಾಕ್ ಅಧ್ಯಕ್ಷರು ಹಾಗೂ ಪಕ್ಷದ ಎಲ್ಲ ಮುಂಚೂಣಿ ಘಟಕಗಳ ಅಧ್ಯಕ್ಷರು, ಹಿರಿಯ ಕಿರಿಯ
ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ-ಧರಿಯಪ್ಪ ಎಲ್ ಕೆ