ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗ್ರಾಮ ಪಂಚಾಯತಿಗಳಾದ ಸೂಳೇರಿಪಾಳ್ಯ, ಹೋಗ್ಯಂ,ಮಾರ್ಟಳ್ಳಿ,ಅಜ್ಜೀಪುರ,ಮೀಣ್ಯಂ,ದಿನ್ನಹಳ್ಳಿ ಮುಂತಾದ ಗ್ರಾಮಪಂಚಾಯತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಹಸುಕರು ಮುಂತಾದ ಜಾನುವಾರುಗಳಿಗೆ ಮೇವು ಇಲ್ಲದ ಕಾರಣ ಪ್ರಾಣಿಗಳು ತುಂಬಾ ಸೊರಗಿ ಹೋಗಿರುವ ಕಾರಣ ಮೇಲ್ಕಂಡ ಪಂಚಾಯತಿಗಳಿಗೆ ಮೇವು ಒದಗಿಸಿ ಗೋ ಶಾಲೆ ನಿರ್ಮಾಣ ಮಾಡಬೇಕೆಂದು ಇಂದು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹನೂರು ತಾಲೂಕಿನ ತಹಸೀಲ್ದಾರ್ ಗುರುಪ್ರಸಾದ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜು ಮಾತನಾಡಿ ಜಾನುವಾರುಗಳಿಗೆ ಮೇವು ಇಲ್ಲದೆ ತುಂಬಾ ಸೊರಗಿ ಹೋಗಿದೆ ಆದುದರಿಂದ ತಾವು ದಯಮಾಡಿ ಗೋಶಾಲೆ ಪ್ರಾರಂಭಿಸಬೇಕೆಂದು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಹನೂರು ಭಾಗದ ರೈತ ಸಂಘದ ಅಧ್ಯಕ್ಷರು ಅಮ್ಜದ್ ಖಾನ್,ಮುಖಂಡ ಬಸವರಾಜು ರೈತ ಸಂಘ ಸದಸ್ಯರುಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್