ಯಾದಗಿರಿ:ಹಿರೇವಡಗೇರಾದ ಬನಸಿರಿ ಪದವಿ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಜಾತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ರಾಚಯ್ಯ ಬಿ ಹೀರೆಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಸಮರ್ಥ ವ್ಯಕ್ತಿಗೆ ಮತ ಹಾಕಿರಿ.ನಮ್ಮ ನಾಡು ನುಡಿಗಾಗಿ,ನಮ್ಮ ದೇಶದ ಶಕ್ತಿ ಬೆಳೆಸುವಂತಹ ವ್ಯಕ್ತಿಗೆ ಮತ ಹಾಕಿರಿ ಎಂದು ನುಡಿದರು.ಕಾಲೇಜಿನ ಆವರಣದಿಂದ ತಹಶಿಲ್ದಾರರ ಕಛೇರಿಯ ವರೆಗೆ ಮತದಾನ ಜಾಗೃತಿ ಜಾತ ನಡೆಸಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿಗಳಾದ ಮಲ್ಲರೆಡ್ಡಿ ಜೆಡಿ,ಶಿವಬಸಪ್ಪ ಪಾಟೀಲ,ಡಿ.ಪಿ.ಸಜ್ಜನ,ಎನ್ಎಸ್.ಎಸ್.ಅಧಿಕಾರಿ ಸುರೇಶಕುಮಾರ ಮತ್ತು ಕಾಲೇಜಿನ ಭೋದಕ ಮತ್ತು ಭೋದಕೇತರ ಸಿಬ್ಬಂದಿ ಹಾಗೂ ಸ್ವಯಂ ಸೇವಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಎಂದು ಪತ್ರಿಕಾ ಪ್ರಕಟಣೆಗಾಗಿ ಉಪನ್ಯಾಸಕರಾದ ಡಿ.ಪಿ.ಸಜ್ಜನ ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.