ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕಾರ್ಮಿಕರ ದಿನಾಚರಣೆಯ ಅಂಗವಾಗಿ ಹಿರಿಯ ವೃದ್ದರಿಗೆ,ಅನಾಥ ಮಕ್ಕಳಿಗೆ ಉಚಿತ ಕ್ಷೌರ ಸೇವೆ:ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ‌ ‌

‌ ‌ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ನಿಸ್ವಾರ್ಥಿ ಸಮಾಜ ಸೇವಕ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಮೇ.೧ ಕಾರ್ಮಿಕರ ದಿನಾಚರಣೆಯ ನಿಮಿತ್ತವಾಗಿ ನಾಲವಾರ ಹೋಬಳಿ ಘಟಕದಲ್ಲಿ ಬರುವ ಕ್ಷೌರದ ಅಂಗಡಿ ‘ಜನಪ್ರಿಯ ಹೇರ್ ಸಲೂನ್ ನಲ್ಲಿ ‘ಇಂದು 65 ಕ್ಕೊ ಹೆಚ್ಚು ಜನತೆಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿದ್ದಾರೆ.ಹಿರಿಯ ವೃದ್ದರಿಗೆ ಹಾಗೂ ಅನಾಥ ಮಕ್ಕಳಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಿ ಸ್ವಾರ್ಥತೆ ಪ್ರಮುಖವಾಗಿರುವ ಪ್ರಸ್ತುತ ದಿನಗಳಲ್ಲಿ ಅತ್ಯಂತ ಬೆಲೆಯುಳ್ಳ,ಅಪರೂಪದ್ದು ಎಂದರೆ ಅದು ಸಮಾಜ ಸೇವೆ.ಈ ಸಮಾಜದಲ್ಲಿರುವ ಅವಶ್ಯಕತೆಯಿರುವವರು,ಅಸಹಾಯಕರಿಗೆ ಸೇವೆ ನೀಡುವುದು,ಪರಿಸರ ಸಂರಕ್ಷಣೆ,ಆರೋಗ್ಯ,ಶಿಕ್ಷಣದ ಬಗ್ಗೆ ಜನಜಾಗೃತಿ,ಮಹನೀಯರ ಸಂದೇಶ ಸಮಾಜಕ್ಕೆ ಮುಟ್ಟಿಸುವುದು ಮತ್ತು ಸಮಾಜದ ಜನರನ್ನು ಜಾಗೃತಿ ಮೂಡಿಸುವುದು ಮತ್ತು ಸಮಾಜದ ಜನರನ್ನು ಸಮಾಜದ ಸಂಘಟನೆಯ ಕಡೆಗೆ ಗಮನ ಸೆಳೆಯುವ ಉದ್ದೇಶದಿಂದ,ಅವರಿಗೆ ಸಮಾಜದ ಕಡೆಗೆ ಬರುವಂತೆ ಸಮಾಜದ ಸಂಘಟನೆ ಮತ್ತಷ್ಟು ಚುರುಕು ಶಕ್ತಿಶಾಲಿ ಮಾಡುವುದು ಸೇರಿದಂತೆ ಮುಂತಾದ ಸಮಾಜಮುಖಿ ಕಾರ್ಯಗಳನ್ನು ನಿಸ್ವಾರ್ಥವಾಗಿ ಮಾಡುವ ನೈಜ ಸಮಾಜ ಸೇವಕರು ಡಾ‌.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಆಗಿ ಸಮಾಜದ ಸೇವೆಯ ಕಾರ್ಯ ಕೆಲಸದ ಜೊತೆಯಲ್ಲಿ ಈ ರೀತಿಯ ಸೇವೆ ಸಲ್ಲಿಸುವುದು.ಇಂದು ಮೇ.1 ಕಾರ್ಮಿಕರ ದಿನಾಚರಣೆ ನಿಮಿತ್ಯ ವಾಗಿ ಅವರು ಮಾಡುವ ಈ ವಿಭಿನ್ನ ರೀತಿಯ ಸೇವೆಯನ್ನು ಮಾಡುವುದರ ಮೂಲಕ ಅನೇಕ ಸಮುದಾಯದ ಮೆಚ್ಚುಗೆ ಪಾತ್ರವಾದರು.ಇವರು ಈಗಾಗಲೇ 13 ಕಡೆಯಲ್ಲೂ ಸೇರಿದಂತೆ ಒಟ್ಟು 1350 ಕ್ಕೊ ಹೆಚ್ಚು ಅನಾಥರಿಗೆ,ಅಂದರೆ ಹಿರಿಯ ವೃದ್ದರಿಗೆ,ಪೌರ ಕಾರ್ಮಿಕರಿಗೆ,ಕಟ್ಟಡ ಕಾರ್ಮಿಕರಿಗೆ,ಸಾಧು-ಸಂತರಿಗೆ, ಅನಾಥ ಮಕ್ಕಳಿಗೆ,ನಿರ್ಗತಿಕರಿಗೆ,ಅಂಧರಿಗೆ,
ಅಂಗವಿಕಲರಿಗೆ,ಅನಾಥ ಶಾಲಾ ಮಕ್ಕಳಿಗೆ, ಅನಾಥಾಶ್ರಮ,ವೃದ್ದಾಶ್ರಮದ ನಿರ್ಗತಿಕರ ಕೇಂದ್ರ ಹಾಗೂ ಶಾಲೆಯ ಮಕ್ಕಳಿಗೆ ಮತ್ತು ಬಸ್ಸ್ಟಾಂಡ್ ನಲ್ಲಿ ಇರುವ ನಿರ್ಗತಿಕರಿಗೆ ತಮ್ಮ ಸ್ವತಃ ಕ್ಷೌರದ ಅಂಗಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ.ಅವರು ಸಮಾಜದ ಸಂಘಟನೆಯ ಜೊತೆಗೆ ಈ ರೀತಿಯ ವಿಭಿನ್ನ ಸೇವೆ ಮಾಡುತ್ತಲೇ ಸಮಾಜದ ಹೆಸರು ಮತ್ತಷ್ಟು ಬೆಳಕಿಗೆ ತರುವ ಕೆಲಸ ಮಾಡುವ ಮೂಲಕ ಅವರಿಗೆ ಈಗಾಗಲೇ ಅನೇಕ ಸಂಘ ಸಂಸ್ಥೆಗಳಿಂದ ರಾಜ್ಯ ಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.ಈ ಸೇವೆ ನಿರಂತರವಾಗಿ ಅನೇಕ ಕಡೆಯಲ್ಲೂ ನಮ್ಮಿಂದ ಮತ್ತು ನಮ್ಮ ಸಮಾಜದ ಅನೇಕ ಮುಖಂಡರ ಸಹಕಾರದಿಂದ ಇನ್ನೂ ವಿವಿಧ ಕಡೆಯಲ್ಲೂ ಮತ್ತು ಅನೇಕ ಜಿಲ್ಲಾ ಮಟ್ಟದಲ್ಲಿ ಸಹ ಈ ರೀತಿಯ ಉಚಿತ ಕ್ಷೌರ ಸೇವೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ