ಯಾದಗಿರಿ:ಕೆಂಭಾವಿ ಹೋಬಳಿಯ ನಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಖಾನಾಪುರ ಗ್ರಾಮದ ಸಮೀಪದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡುವ ಕಾರ್ಮಿಕರಿಗೆ ಮತ ಪ್ರಚಾರ ಮಾಡುವ ಸಂದರ್ಭದಲ್ಲಿ ಮಾತನಾಡಿ ಶಂಕ್ರಣ್ಣ ವಣಿಕ್ಯಾಳ ಅವರು ಮಾತನಾಡಿ ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಹೇಳಿದರು.
ಇಷ್ಟೆಲ್ಲಾ ಗ್ಯಾರಂಟಿ ಯೋಜನೆಗಳನ್ನು ಗಮನದಲ್ಲಿಟ್ಟು ನಮ್ಮ ಕಾಂಗ್ರೆಸ್ ಪಕ್ಷದ ಗುರುತಿಗೆ ಮತ ನೀಡಿ ಎಂದು ಹೇಳಿದರು ಮತ್ತು ಇದೆ ಸಂದರ್ಭದಲ್ಲಿ ಪತ್ರಕರ್ತರು ಗ್ಯಾರೆಂಟಿ ಯೋಜನೆ ಕಾಡ೯ ಕೇಳಿದ ಸಂದರ್ಭದಲ್ಲಿ ನಿರಾಕರಿಸಿದ ಕಾಂಗ್ರೆಸ್ ಕಾರ್ಯಕರ್ತರು ಪತ್ರಕರ್ತರಿಗೆ ಅಗೌರವ ತೋರಿಸುತ್ತಿರುವುದು ಎದ್ದು ಕಾಣುವಂತೆ ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಶರಣಗೌಡ ಕೆಂಚಗೋಳ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಹಾಂತಗೌಡ ಪೋಲಿಸ್ ಪಾಟೀಲ್ ಸದಸ್ಯರು ವಿಶ್ವನಾಥ್ ಹವಾಲ್ದಾರ ರಾಜು ಉಪ್ಪಾರ ರವಿಕಾಂತ ಉಪ್ಪಾರ ಶಿವರಾಜ ಸಾಹುಕಾರ ಬೂದೂರ ವಿನೋದ ರೆಡ್ಡಿ ಸಾಹುಕಾರ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.