ಬೀದರ್ ನಗರದ ಜನವಾಡ ಸರ್ಕಾರಿ ಆದರ್ಶ ವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಚಿನ್ಮಯ ಸಜ್ಜನ ಶೇ. 92% ಪ್ರತಿಶತ ಹಾಗೂ ಸಂತೋಷ ಕಲಶೆಟ್ಟಿ ಶೇ. 81% ಪ್ರತಿಶತ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ಚಿನ್ಮಯ ಸಜ್ಜನ ಮಾತನಾಡಿ ತನ್ನ ಸಾಧನೆಗೆ ಪಾಲಕರು ಹಾಗೂ ಶಿಕ್ಷಕರೇ ಕಾರಣರಾಗಿದ್ದು, ಅವರ ಉತ್ತಮ ಮಾರ್ಗದರ್ಶನವೇ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿ ಮುಂದೆ ಇಂಜಿನಿಯರ್ ಆಗುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ಇವರ ಸಾಧನೆಗೆ ಪಾಲಕರಾದ ಡಾ.ಸಂತೋಷಕುಮಾರ ಸಜ್ಜನ,ಶ್ರೀಮತಿ ಸುನೀತಾ ಸಜ್ಜನ,ವಿದ್ಯಾರ್ಥಿಯ ಅಜ್ಜಿ ಪಾರ್ವತಿ ಸಜ್ಜನ ಮತ್ತು ಸಹೋದರಿ
ಕೀರ್ತಿ ಸಜ್ಜನ ಮತ್ತು ಶಾಲೆಯ ಮುಖ್ಯಗುರುಗಳು,ಶಿಕ್ಷಕರು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಅಭಿನಂದನೆಯನ್ನು ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ:ಸಾಗರ್ ಪಡಸಲೆ