ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ತಾಯಿಗಿಂತ ದೊಡ್ಡ ದೇವರಿಲ್ಲ

ಈ ಜಗತ್ತಿನಲ್ಲಿ ದೇವರಿಗಿಂತಲೂ ಮುಗಿಲಾದ ಶಕ್ತಿ ಎಂದರೆ ಅದು “ಅಮ್ಮ” ಮಾತ್ರ ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ದೇವರು ಅಮ್ಮನನ್ನು ಸೃಷ್ಟಿಸಿದ ಎಂಬುದು ಬರಿ ಮಾತಲ್ಲ ಅದು ವಾಸ್ತವಿಕವಾಗಿ ಸತ್ಯ ಕೂಡ ಹೌದು!

ನಮ್ಮ ತಾಯಿಯ ಹೊರತಾಗಿ ಅವರು ನಮ್ಮ ಮೊದಲು ಗುರುವೂ ಹೌದು !
ಅಮ್ಮನ ಮಡಿಲಲ್ಲಿ ಜೋಗುಳದ ನುಡಿಗಳನ್ನು ಕೇಳುತ್ತಾ ಸ್ವರ್ಗದ ಹಾದಿಯಲ್ಲೆ ಕರೆದುಕೊಂಡು ಹೊಗುತ್ತಿದ್ದಳು.
ತಾಯಿ ನಮಗೆ ಒಳ್ಳೆಯ ನಡತೆ ಕಲಿಸಿಕೊಡುತ್ತಾಳೆ.
ಯಾವುದು ನಿಜಂಶವೆನ್ನುವದು ಇನ್ನೇನೋ ತಪ್ಪಾಗಿದೆ ಅದನ್ನು ಗುರುತಿಸಲು ಕಲಿಯಿರಿ ನಾವು ನಮ್ಮ ಪ್ರಾಥಮಿಕ ಜ್ಞಾನವನ್ನು ನಮ್ಮ ತಾಯಿಂದ ಪಡೆಯುತ್ತೇವೆ.ನಾವು ಕಲಿಯುವ ಎಲ್ಲವನ್ನೂ ನಾವು ಮೊದಲು ನಮ್ಮ ತಾಯಿಂದ ಕಲಿಯುತ್ತೇವೆ.ಹಾಗಾಗಿ ನನ್ನ ತಾಯಿಯೇ ನನ್ನ ಮೊದಲ “ಗುರು” ಎಂದು ಬಹಳ ಹೆಮ್ಮೆಯಿಂದ ಹೇಳಬಲ್ಲೆ,
“ಮೇಲೋಬ್ಬ ಕುಂತಿಹನು ಎಲ್ಲಾನೂ ನೋಡ್ತಿಹನು ಚಿಂತ್ಯಾಕೆ ಮಾಡುತ್ತಿ ನನ್ನಮ್ಮ ಈ ತನಕ್ಕೆ ಆಗಿರಬಹುದು ಮುಂದೇನು ಆಗದು ಕೊರಗೋದ ನಿಲ್ಲಿಸೇ ನನ್ನಮ್ಮ
ಕಷ್ಟನೂ ಕಳಿಯುವುದು ಸುಖವು ಬರುವುದು ಭರವಸೆ ಇರಿಸೇ ನನ್ನಮ್ಮ ಯೋಚನೆ ಮಾಡದೆ ಜೀವನ ನಡೆಸೇ ನಿನ್ನ ಬೆನ್ನುಲುಬಾಗಿ ನಾನಿರುವೆ ನನ್ನಮ್ಮ”!!

ಉಸಿರು ಹೆಸರು ಬದುಕು ಕೊಡುವಳು,ಹಸಿದಾಗ ಹಸಿವು ನೀಗಿಸುವವಳು,ಎಲ್ಲವನ್ನೂ ಸಹಿಸಿ ಸಲುಹುವವಳು,ತಪ್ಪು ಮಾಡಿದಾಗ ತಿದ್ದಿ ತೀಡುವವಳು,ಬೈಗುಳದಲ್ಲೂ ಪ್ರೀತಿ ಕೊಡುವವಳು, ಬದುಕಿನ ನೀತಿ ನಿಯಮಗಳ ಕಲಿಸುವವಳು,ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಲ್ಲುವವಳು,ನಾವು ಗೆದ್ದಾಗ ತಾನು ಗೆದ್ದೆಂತೆ ಸಂಭ್ರಮಿಸುವವಳು ಹಾಗೂ ನಾವು ಸೋತಾಗ ಆತ್ಮಸ್ಥೈರ್ಯ ತುಂಬುವವಳು ನೋವಿನಲ್ಲೂ ನಗು ಹಂಚುವವಳು ಅಂತರಂಗದಲ್ಲಿ ಕಲ್ಮಶವಿಲ್ಲದವಳು,ಕನಸಿನಲ್ಲೂ ನಮ್ಮನ್ನು ಕಾಯುವವಳು ನಮಗಾಗಿಯೇ ಇಡೀ ಜೀವನ ಮೀಸಲಿಟ್ಟವಳು.

ಅಮ್ಮ ಎಂದರೆ ಬರಿ ಪದವಲ್ಲ ಪದೇ ಪದೇ ಸಿಗುವ ವಸ್ತುವೂ ಅಲ್ಲ ಅವಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ದೇವರಗಿಂತ ಕಡಿಮೆ ಇಲ್ಲ,ಹುಡುಕಿದರೂ ಸಿಗುವುದಿಲ್ಲ,ಅವಳನ್ನು ಒಮ್ಮೆ ಕಳೆದುಕೊಂಡರೆ ಜೀವನದಲ್ಲಿ ನೆಮ್ಮದಿಯೇ ಇಲ್ಲ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಆನಂದ ಪರಮೇಶ್ವರ ಚಾಂದಕವಠೆಯವರು ತನ್ನ ತಾಯಿ ಪ್ರಭಾವತಿ ಪರಮೇಶ್ವರ ಚಾಂದಕವಠೆ ರವರ ತಾಯಿಯ ನಲ್ಮೆಯ ನುಡಿಗಳನ್ನು ಪ್ರಸ್ತಾಪಿಸಿದರು.

ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ