ಅವನು ಅವಳಿಗೆ ನಿತ್ಯವೂ ಪ್ರೇಮ ಪತ್ರ ನೀಡುತ್ತಿದ್ದ…ಅವಳು ಅದನ್ನು ತೆಗೆದುಕೊಂಡು ಮರುದಿನ ಅದನ್ನೇ ವಾಪಸ್ ನೀಡಿ ಏನೂ ಉತ್ತರ ಹೇಳದೇ ಹೋಗುತ್ತಿದ್ದಳು.. ಕೊನೆಗೊಂದು ದಿನ ಅವನು ನಿರಾಸೆಗೊಂಡು ಸಾಯಲು ಹೊರಟ. ಸಾಯುವುದಕ್ಕೆ ಮೊದಲು ತಾನು ಬರೆದ ಕೊನೆಯ ಪ್ರೇಮ ಪತ್ರವನ್ನೊಮ್ಮೆ ಬಿಡಿಸಿದ. ಅದರ ಕೊನೆಯಲ್ಲಿ, “ನಾನೂ ಕೂಡ ನಿನ್ನನ್ನು ತುಂಬಾ ಪ್ರೀತಿಸುವೆ..” ಎಂದು ಅವಳು ಬರೆದ ವಾಕ್ಯ ಕಣ್ಣಿಗೆ ಬಿದ್ದಿತು…!
✍🏻ಮನು ಎಸ್ ವೈದ್ಯ




















