ಬೆಂಗಳೂರು:ವಿಧಾನಸೌಧದಲ್ಲಿ ಅನಗತ್ಯ ಕಿರಿ ಕಿರಿ ತಪ್ಪಿಸಲು ಹೊಸ ರೀತಿಯ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಶ್ರೀ ಪರಮೇಶ್ವರ ಅವರು ಸ್ಪಷ್ಟಪಡಿಸಿದ್ದಾರೆ.
ಮೊದಲಿನಂತೆ ನೇರಾ ನೇರವಾಗಿ ಪ್ರವೇಶಿಸಲು ಸಾಧ್ಯವಾಗದಂತೆ ಬ್ಯಾಡ್ಜ್ ಅಳವಡಿಸಿರುವ ಪ್ರವೇಶ ಚೀಟಿಯನ್ನು ನೀಡುವ ವ್ಯವಸ್ಥೆ ಮಾಡಿದ್ದು ಅದರಲ್ಲಿ ಕ್ಯೂ ಆರ್ ಕೋಡ್ ಇರಲಿದ್ದು ವ್ಯಕ್ತಿ ಒಬ್ಬ ನಿಷೇಧಿತ ವಸ್ತುಗಳನ್ನು ಹೊಂದಿದ್ದರೆ ಈ ಬ್ಯಾಡ್ಜ್ ತಕ್ಷಣ ಸಂಬಂಧಿಸಿದ ರಕ್ಷಣಾ ಸಿಬ್ಬಂದಿಗೆ ಸೂಚನೆ ಕಳುಹಿಸುತ್ತದೆ.ಇದರಿಂದ ಸಂಭವನೀಯ ಅಪರಾಧ ತಪ್ಪಿಸಲು ಅನುಕೂಲ ಆಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್