ಶಿವಮೊಗ್ಗ:ಜನ ಶಿಕ್ಷಣ ಸಂಸ್ಥೆಯಲ್ಲಿ ಮೇ 15ರಿಂದ ಮಹಿಳೆಯರಿಗೆ ಟೈಲರಿಂಗ್,ಬ್ಯುಟೀಷಿಯನ್ ಮತ್ತು ಎಂಬ್ರಾಯಿಡರಿ ಮೊದಲಾದ ವಿವಿಧ ತರಬೇತಿಗಳು ಪ್ರಾರಂಭವಾಗಿದೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ತರಬೇತಿ ಉಚಿತವಾಗಿದ್ದು ಮೊದಲು ಬಂದ 20 ಜನರಿಗೆ ಆದ್ಯತೆ ಇರುತ್ತದೆ.
ಆಸಕ್ತರು ಕೂಡಲೇ ಜನ ಶಿಕ್ಷಣ ಸಂಸ್ಥೆ,ಕಾಶೀಪುರ ರೈಲ್ವೇ ಗೇಟ್ ಹತ್ತಿರ,ಸೋಮಿನಕೊಪ್ಪ ರಸ್ತೆ, ವಿನೋಬನಗರ ಇಲ್ಲಿಗೆ ಬಂದು ಹೆಸರನ್ನು ನೋಂದಾಯಿಸುವುದು.
ಫೋನ್ ನಂಬರ್ : 08182-298014, ಇವರನ್ನು ಸಂಪರ್ಕಿಸಬಹುದು ಎಂದು ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಎಸ್.ವೈ.ಅರುಣಾದೇವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ.



















