ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ಜೀವನಾಡಿ ದೊಡ್ಡ ಹೊಸ ಕೆರೆಗೆ ಕಾಲುವೆ ಮೂಲಕ ನೀರು ಹರಿಸಿ ಕೆರೆ ತುಂಬಿಸಿರುವುದಕ್ಕೆ ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ವಡಗೇರಾ ತಾಲೂಕು ಅಧ್ಯಕ್ಷ ವಿದ್ಯಾಧರ ಜಾಕ ಸಂತಸ ವ್ಯಕ್ತಪಡಿಸಿ ಅವರು ಮಾತನಾಡಿ ಬರಗಾಲದಿಂದ ಹಳ್ಳಕೊಳ್ಳ ಕಾಲುವೆಗಳು ಬರಿದಾಗಿದ್ದು ಜನಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದೆ ತುಂಬಾ ತೊಂದರೆ ಅನುಭವಿಸುತ್ತಿವೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿ ಕೆಲವು ದಿನಗಳ ಹಿಂದೆ ನಮ್ಮ ರೈತ ಸಂಘಟನೆ ವತಿಯಿಂದ ವಡಗೇರಾ ತಹಸಿಲ್ದಾರರಿಗೆ ಮನವಿ ಸಲ್ಲಿಸಿದ್ದೆವು ನಮ್ಮ ಮನವಿಗೆ ಸ್ಪಂದಿಸಿ ಕಾಲುವೆ ಮತ್ತು ಕೆರೆಗಳಿಗೆ ನೀರು ಹರಿಸಿರುವುದರಿಂದ ಜನಜಾನುವಾರುಗಳಿಗೂ ರೈತಾಪಿ ವರ್ಗಕ್ಕೂ ತುಂಬಾ ಅನುಕೂಲವಾಗಿದೆ ಎಂದರು. ನಮ್ಮ ಮನವಿಗೆ ಸಹಕರಿಸಿದ ಅಧಿಕಾರಿಗಳಿಗೆ ರೈತ ಸಂಘದ ವತಿಯಿಂದ ತಾಲೂಕು ಅಧ್ಯಕ್ಷ ವಿದ್ಯಾಧರ್ ಜಾಕ ಹಾಗೂ ತಾಲೂಕು ಗೌರವಾಧ್ಯಕ್ಷ ಶರಣು ಜಡಿ ರವರು ಜಿಲ್ಲಾಧಿಕಾರಿಗಳಿಗೂ,ತಹಸೀಲ್ದಾರರಿಗೂ ಕೆ.ಬಿ.ಜೆ.ಎನ್. ಎಲ್ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.
ವರದಿ:ಶಿವರಾಜ ಸಾಹುಕಾರ್ ವಡಗೇರಾ