ವಿಶ್ವದೆಲ್ಲಡೆ ಯೋಗ ದಿನ
ಯೋಗ ಮಾಡಿರಿ ತಪ್ಪದೇ ಪ್ರತಿದಿನ
ಸಂದೇಹವೇ ಬೇಡ ನಿತ್ಯ ಆರೋಗ್ಯ ದಿನ
ಸೀಮಿತವಾಗದಿರಲಿ ಯೋಗ ಕೇವಲ ಈ ದಿನ
ನೆನಪಿರಲಿ ನಾಣ್ಣುಡಿ ಆರೋಗ್ಯವೇ ಭಾಗ್ಯ
ರೋಗದಿ ದೂರವಿರಲು ಯೋಗವೇ ಸೌಭಾಗ್ಯ
ದೇಹಕ್ಕೆ ಯೋಗವಿರದಿದ್ದರೆ ಬದುಕು ದೌರ್ಭಾಗ್ಯ
ಯೋಗದಿಂದ ಯೋಗಿಯಾಗಿ ಸಮಾಜಕ್ಕಾಗಿ ಯೋಗ್ಯ
ವಿಶ್ವ ಯೋಗ ದಿನ ಜೂನ್ ಇಪ್ಪತ್ತೊಂದು
ಬೇಕಾಗಿದೆ ಯೋಗವು ಸದೃಢ ದೇಹಕ್ಕಿಂದು
ದೇಹದ ಕೊಬ್ಬು ಕರಗಿಸಲು ಯೋಗ ಸದಾ ಮುಂದು
ಯೋಗದ ಪಿತಾಮಹ ಪತಂಜಲಿಗೆ ನಮಸ್ಕಾರವಿಂದು
ದಿನಕ್ಕೊಮ್ಮೆ ನಿಗದಿತ ಸಮಯಕ್ಕಿರಲಿ ಯೋಗ
ದೂರ ಸರಿಯುವದು ಬರುವ ರೋಗ ನಿಲ್ಲಲಿ ಜಂಕ್ ಫುಡ್ ಗಳನ್ನ ತಿನ್ನುವಲ್ಲಿ ವೇಗ
ಯೋಗವು ಉತ್ತಮ ಆರೋಗ್ಯದ ಒಂದು ಭಾಗ
ಬೆಳಗಿನ ಜಾವಕ್ಕಿರಲಿ ಸೂರ್ಯ ನಮಸ್ಕಾರ
ಅನುಲೋಮ ವಿಲೋಮ ದೇಹಕ್ಕೆ ಉಪಯೋಗಕರ
ಪ್ರಾಮಾಣಿಕ ಯೋಗದಿ ಜೀವನ ಆರೋಗ್ಯಕರ
ಖ್ಯಾತ ಯೋಗಿಗಳಿಗೆ ಸಲ್ಲಿಸೋಣ ನಮಸ್ಕಾರ
-ಶ್ರೀ ಮುತ್ತು.ಯ.ವಡ್ಡರ (ಶಿಕ್ಷಕರು)
ಬಾಗಲಕೋಟೆ