ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಿಂದ ಚಾಮರಾಜನಗರಕ್ಕೆ ಹೊರಡುವ ರಸ್ತೆಯಲ್ಲಿ ಮಾರ್ಗ ಮದ್ಯೆ ಅಂದರೆ ಟಿಪ್ಪು ಸರ್ಕಲ್ ಅಥವಾ ಕೊಡಲ್ಲಿ ಸರ್ಕಲ್ ಎಂದು ಕರೆಯಲ್ಪಡುವ ಸರ್ಕಲ್ ನಲ್ಲಿ ರಸ್ತೆ ಗುಂಡಿ ಬಿದ್ದಿದ್ದು ನಿತ್ಯ ಸಾವಿರಾರು ಗಾಡಿಗಳು ತಿರುಗಾಡುವ ಜಾಗವಾಗಿದ್ದು ತಿರುಗಾಡಲು ತುಂಬಾ ಕಿರಿಕಿರಿ ಆಗಿದೆ.
ಆ ಜಾಗದಲ್ಲಿ ಸುಮಾರು ಅಂಗಡಿ ಮಳಿಗೆಗಳು ಇದ್ದು ನಿತ್ಯ ಸಾವಿರಾರು ಜನರು ತಿರುಗಾಡುವ ಒಂದು ಸರ್ಕಲ್ ಆಗಿದೆ.ನಿತ್ಯ ಯಾವುದೇ ಅಧಿಕಾರಿಯು ಜಿಲ್ಲೆಗೆ ಹೋಗಬೇಕಾದರೆ ಅದೇ ಮಾರ್ಗವಾಗಿ ಹೋಗಬೇಕಾಗುತ್ತೆ.ಆದರೂ ಅಧಿಕಾರಿಗಳು ಈ ಗುಂಡಿಬಿದ್ದ ರಸ್ತೆಯ ಬಗ್ಗೆ ಯಾವುದೆ ಕಾಳಜಿ ತೋರದೆ ರಸ್ತೆ ಅಭಿವೃದ್ಧಿ ಬಗ್ಗೆ ಗಮನ ಕೊಡುತಿಲ್ಲ ಎಂದು ಸಾರ್ವಜನಿಕರು ಕರುನಾಡ ಕಂದ ಪತ್ರಿಕೆಗೆ ತಿಳಿಸಿದ್ದಾರೆ.
ಈ ವಿಚಾರವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷರಾದ ಸರ್ಪರಾಜ್ ಇದರ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ವರದಿ ಗುಂಡ್ಲುಪೇಟೆ ಕುಮಾರ್