ಕಲಬುರಗಿ:ಚಿತ್ತಾಪುರ ಪುರಸಭೆ 2024-25
ಸಾಲಿನ ಆಸ್ತಿ ತೆರಿಗೆಯನ್ನು ಜುಲೈ 3 ರಿಂದ ಜುಲೈ31ರವರೆಗೆ ಪಾವತಿಸಿದರೆ ಶೇ.5 ರಷ್ಟು ರಿಯಾಯತಿ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ತಿಳಿಸಿದ್ದಾರೆ. ಆಗಸ್ಟ್ 1 ರಿಂದ ಆಸ್ತಿ ತೆರಿಗೆ ಶೇ. 2 ರಷ್ಟು ದಂಡ ವಿಧಿಸಲಾಗುವುದು ಇದರಿಂದ ಸಕಾಲದಲ್ಲಿ ಜು.31ರೊಳಗಾಗಿ ಆಸ್ತಿ ತೆರಿಗೆ ಸಂದಾಯ ಮಾಡಬೇಕು. ಈ ರಿಯಾಯಿತಿಯ ಸದುಯೋಗ ತೆರಿಗೆದಾರರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ವರದಿ ಮೊಹಮ್ಮದ್ ಅಲ್ಲಿ ಚಿತ್ತಾಪುರ