ತುಮಕೂರು ಜಿಲ್ಲೆಯ ಶಿರಾ ನಗರದ ತಾಲೂಕು ಕಚೇರಿಯಲ್ಲಿ ಇಂದು ನಡೆದ ಬಗರ್ ಹುಕುಂ ಸಕ್ರಮೀಕರಣ ಸಮಿತಿ ಸಭೆಯಲ್ಲಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಕೆಲವು ತಾಂತ್ರಿಕ ದೋಷಗಳಿಂದ ಕಾರಣಗಳಿಂದ ಸಾಗುವಳಿ ಚೀಟಿ ನೀಡುವ ಕಾರ್ಯ ವಿಳಂಬವಾಗುತ್ತಿರುವುದರ ಬಗ್ಗೆ ತಿಳಿದುಕೊಂಡ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಸಚಿವರು ಮಾತನಾಡಿ ಅರ್ಹ ಅರ್ಜಿದಾರರಿಗೆ/ಫಲಾನುಭವಿಗಳಿಗೆ ಸಾಗುವಳಿ ಚೀಟಿಯನ್ನು ನೀಡುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಟಿ ಬಿ ಜಯಚಂದ್ರ ಅಧಿಕಾರಿಗಳಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಶಿರಾ ತಾಲೂಕಿನ ದಂಡಾಧಿಕಾರಿ ದತ್ತಾತ್ರಾಯ ಹಾಗೂ ಬಗರ್ ಹುಕುಂ ಕಮಿಟಿಯ ಸದಸ್ಯರು ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ ಕೊಟ್ಟ ಕರಿಯಣ್ಣ