ಮೈಸೂರಿನ ಬಹುಕೋಟಿ ಮುಡಾ ಹಗರಣ ಖಂಡಿಸಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೃಷ್ಣರಾಜ ಕ್ಷೇತ್ರದ ಕುವೆಂಪು ನಗರ ಭಾಗದ 47ನೇ ವಾರ್ಡಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಸಾಗಿದ ಬೃಹತ್ ಪ್ರತಿಭಟನೆ ಮಹಾರಾಜ ಕಾಲೇಜು ಮೈದಾನಕ್ಕೆ ತಲುಪಿತು.
ಅಧ್ಯಕ್ಷತೆಯನ್ನು ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದಂತಹ ಶ್ರೀ ಶಿವಕುಮಾರ್ ರವರು ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರುಗಳಾದಂತಹ ಸೋಮು ಕೇಬಲ್, ರಾಮದಾಸ್,ಸತ್ರಜಿತ್,ಮಹದೇವಪ್ಪ,ವಾರ್ಡಿನ ಅಧ್ಯಕ್ಷರಾದ ಸಂಪತ್ ಕುಮಾರ್,ಪ್ರಧಾನ ಕಾರ್ಯದರ್ಶಿಯಾದ ಅಭಿಷೇಕ್ ಅವರು ಬೂತಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ-ಜೆ.ಪ್ರದೀಪ್