ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲ ಮಡಿಕೆ ಹೋಬಳಿಯ ಎನ್ ಹೊಸಹಳ್ಳಿ ತಾಂಡಾದ ಬೆಟ್ಟದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಅಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ.
ಬೆಟ್ಟದ ಪಕ್ಕದಲ್ಲಿಯೇ 180ಕ್ಕೂ ಹೆಚ್ಚು ಮನೆಗಳಿದ್ದು, ರಾತ್ರಿ ವೇಳೆ ಊರಿನ ಒಳಗೆ ಬರುವ ಚಿರತೆ ನಾಯಿಗಳನ್ನು ಬೇಟೆಯಾಡುತ್ತಿದೆ, ಇದರಿಂದ ರಾತ್ರಿಯಾದರೆ ಸಾಕು ಹೊರಗಡೆ ಬರಲು ಭಯವಾಗುತ್ತದೆ ಎಂದು ಗ್ರಾಮಸ್ಥರಾದ
ಚಂದ್ರು,ತಿಪ್ಪೇಸ್ವಾಮಿ ,ಪುರುಷೋತ್ತಮ್, ಶ್ರೀನಿವಾಸ್ ನಾಯ್ಕ ,ಶ್ರೀ ರಾಮ ನಾಯ್ಕ ತಮ್ಮ ಅಳಲನ್ನು ತೋಡಿಕೊಂಡರು.
ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಶೀಘ್ರವೇ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಬಂಧಿಸುವಂತೆ ಮನವಿ ಮಾಡಿದರು.