ಬೆಂಗಳೂರು:ಫ್ಯಾಮಿಲಿ ಪ್ಲಾನಿಂಗ್ ಆಫ್ ಇಂಡಿಯಾದ ಬೆಂಗಳೂರು ಘಟಕವು ತಮ್ಮ ಸಂಸ್ಥೆಯ ೭೫ ನೇ ಸಂಸ್ಥಾಪನಾ ದಿನವನ್ನು ವಿಜೃಂಬಣೆಯಿಂದ ಆಚರಿಸಿತು. ಕರ್ನಾಟಕದ ಕಾಲೇಜಿಯೇಟ್ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ. ಜಿ ಶೋಭಾ ಈ ಸಮಾರಂಭವನ್ನು ಉದ್ಘಾಟಿಸಿದರು. ಈ ಸಮಾರಂಭದಲ್ಲಿ ಸ್ತ್ರಿರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್, ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾದ ಬೆಂಗಳೂರು ಪ್ರಾದೇಶಿಕ ಕಛೇರಿಯ ಮುಖ್ಯಸ್ಥ ಶ್ರೀ ಕೆ ಪಾರ್ಥಸಾರಥಿ ನಾಯ್ಡು ಮತ್ತು ಸಂಸ್ಥೆಯ ನಿವೃತ್ತ ಅಧ್ಯಕ್ಷೆ ಶ್ರೀಮತಿ ಶಾಂತಾ ಆರ್ ಬಾಳಿಗಾ ರವರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ