ಗಗನದ ತುಂಬಾ ಮುಸುಕಿತು ಮೋಡ
ಸುತ್ತಲು ಕತ್ತಲು ಹರಡಿತು ನೋಡ
ಬಡಿಯದೆ ರೆಪ್ಪೆ ಸರಿದೋ ಸುರಿದು
ಎದೆ ಒಳಗೆಲ್ಲ ನೀರೆ ಹರಿದು
ಮೋಡವ ಸುರಿಯಿತು ಭೂಮಿಗೆ ಮಳೆಯ ತುಂಬಿಸಿ ತುಳುಕಿಸಿ ಹರಿಸಿತು ಹೊಳೆಯ ಹಾದಿಗೆ ಬೀದಿಗೆ ಎಲ್ಲಿಯೂ ನೀರು ಯಾರಿಗೂ ದಕ್ಕದೆ ಹೋಯಿತು ಸೂರು
ತುಂಬಿತು ತುಳುಕಿತು ಒಳ್ಳೆಯ ಸೊಕ್ಕಿ
ಕೆರೆ ಹಳ್ಳ ತುಂಬಿತು ಪ್ರವಾಹ ಉಕ್ಕಿ
ಹರಿದು ಹೋಯಿತು ಮನೆಮಠ ಎಲ್ಲಾ
ಕಳೆಯೋ ಬೆಳೆಯೋ ಸಮಾಧಿಯೇ ಎಲ್ಲಾ
ನಿನ್ನಯ ಕೋಪಕ್ಕೆ ಗಾಬರಿಯಾಗಿ
ಸೃಷ್ಟಿಯೇ ಇಲ್ಲಿ ಸಮಾಧಿಯಾಗಿ
ಹೆಚ್ಚಿನ ಮಳೆಯೂ ಬೇಡವೇ ನಮಗೆ
ಉಳಿಯದು ಇನ್ನೂ ಏನು ಕೊನೆಗೆ
-ಸಂಗಮೇಶ್ವರ ಎಸ್ ಮುರ್ಕೆ
ತಾಲೂಕು ಕಮಲನಗರ್
8495861795