ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪಾರಮಾರ್ಥಿಕ ಜ್ಞಾನ ಶ್ರವಣ,ಮನನ,ನಿಧಿದ್ಯಾಸ ಮಾಡುವುದೆ ಶ್ರಾವಣ ಮಾಸ

ನಮ್ಮ ಭಾರತೀಯ ಪರಂಪರೆಯಲ್ಲಿ ಶ್ರಾವಣ ಮಾಸ ವಿಶೇಷವಾದ ಮಹತ್ವವನ್ನು ಹೊಂದಿರುವ ಮಾಸವಾಗಿದೆ, ವರ್ಷದ ಹನ್ನೊಂದು ತಿಂಗಳು ತಮ್ಮ ಸಂಸಾರದ ಜಂಜಾಟದಲ್ಲಿ ಮೈ ಮರೆತರೂ ಪರವಾಗಿಲ್ಲ ಶ್ರಾವಣ ಮಾಸದಲ್ಲಿ ಎಲ್ಲರೂ ಭಕ್ತಿಯಲ್ಲಿ ಮಿಂದೇಳುವುದನ್ನು ನಾವು ಕಾಣುತ್ತೇವೆ, ಹೌದು ಯಾಕೆ ಈ ಮಾಸದಲ್ಲಿಯೇ ಇಷ್ಟೆಲ್ಲಾ ದೇವತಾ ಆಚರಣೆ ಮತ್ತು ಧಾರ್ಮಿಕ ಗುರುಗಳಿಗೆ ಮಹತ್ವ ಗೌರವ ಕೊಡುವನಂತದನ್ನು ಕಾಣುವ ಮಾಸ ಇದಾಗಿದೆ,17 ನಕ್ಷತ್ರಗಳು ಸಹ ಒಂದೇ ರೇಖೆಯಲ್ಲಿ ಬಂದು ಮಂಗಳಕರವಾದ ಫಲಗಳನ್ನು ಕೂಡುವ ಮಾಸವೆ ಈ ಶ್ರಾವಣ ಮಾಸವಾಗಿದೆ, ಈ ಮಾಸದಲ್ಲಿ ಯಾರು ಮನಃ ಪೂರ್ವಕವಾಗಿ ತಮ್ಮ ಸಂಕಲ್ಪ ಈಡೇರಿಕೆಗಾಗಿ ಶ್ರೀ ರುದ್ರಾಭಿಷೇಕ ಪೂಜೆ, ಸುಖ ಸಂಪತ್ತಿಗಾಗಿ ವರಲಕ್ಷ್ಮಿ ಮಹಾಪೂಜೆ, ವಿದ್ಯೆ ಬುದ್ದಿಗಾಗಿ ಶಾರದಾ ಪೂಜೆ, ಸಂಕಷ್ಟ ಪರಿಹಾರಕ್ಕಾಗಿ ಶ್ರೀ ಸತ್ಯನಾರಾಯಣ ಪೂಜೆ, ಮಂಗಳಗೌರಿ ವ್ರತ, ನಾಗರ ಪಂಚಮಿ ನಾಗದೇವತೆಗೆ ಹಾಲನೆರೆಯುವುದು, ಕೃಷ್ಣ ಜನ್ಮಾಷ್ಟಮಿ, ಹಾಗೂ ಜಗತ್ತಿನಲ್ಲಿ ಪವಿತ್ರ ಬಂಧನ ಅಂದರೆ ಅದು ಸಹೋದರಿ ಸಹೋದರರ ಬಂಧ ಈ ರಕ್ಷಾ ಬಂಧನವೂ ಸಹ ಶ್ರಾವಣ ಮಾಸದಲ್ಲಿಯೆ ಬರುವಂತದ್ದು,
ಈ ಮಾಸದಲ್ಲಿ ಬರುವಂತ ಎಲ್ಲಾ ಸೋಮವಾರಗಳು ಶಿವಭಕ್ತರಿಗೆ ಮುಕ್ತಿಯ ಸೋಪಾನವಿದ್ದಂತೆ, ಸೋಮವಾರ ದಂದು ಯಾರು ಭಕ್ತಿಯಿಂದ ವಿಶೇಷ ವ್ರತ ಪೂಜಾದಿ ಕೈಂಕರ್ಯಗಳನ್ನು ಹಾಗೂ ಉಪವಾಸವ್ರತ ಆಚರಿಸುವರೊ ಅವರ ಸಂಕಲ್ಪ ಅತಿ ಶೀಘ್ರದಲ್ಲಿ ಈಡೇರುವವು ಎಂಬ ಪ್ರತೀತಿ ಇವೆ,

ಹಾಗೆಯೆ ಈ ಶ್ರಾವಣ ಮಾಸದಲ್ಲಿ ಮಾನವನ ಜೀವನದ ಪರಮಾನಂದ ಪ್ರಾಪ್ತಿಗಾಗಿ ಶರಣರ, ಸಂತರ, ಮಹಾತ್ಮರ, ಪುರಾಣ, ಪ್ರವಚನ, ಶಾಸ್ತ್ರ,ಸಂಗೀತ, ಭಜನೆ, ಯಜ್ಞ,ಯಾಗಾದಿಗಳು, ಪುಣ್ಯಮಯ ಕ್ಷೇತ್ರಗಳ ದರ್ಶನ ಪಡೆದರೆ ಪುಣ್ಯ ಪ್ರಾಪ್ತವಾಗುವುದು, ಅದಕ್ಕಾಗಿಯೇ ಶ್ರಾವಣ ಮಾಸ ಬಂದರೆ ಸಾಕು ಎಲ್ಲೆಲ್ಲೂ ಸಡಗರ ಸಂಭ್ರಮ ಭಕ್ತಿಮಯ ವಾತಾವರಣ ಕಾಣುತ್ತೇವೆ ಹಾಗೂ ಕೆಲ ಯುವಕರು ಭಕ್ತಿಯಿಂದ ಶ್ವೇತ ವಸ್ತ್ರಗಳನ್ನು ಧರಿಸುತ್ತಾರೆ ತಿಂಗಳ ಪರಿಯಂತರವಾಗಿ ಹಾಗೂ ಹೆಣ್ಣುಮಕ್ಕಳು ಲಕ್ಷ್ಮೀ ವ್ರತ, ಉಪವಾಸ ವ್ರತ, ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನಕ್ಕೆ ಹೋಗಿ ಬರೋದು ಹೀಗೆ ಅನೇಕ ಭಕ್ತಿಮಯವಾದದ್ದನ್ನು ಕಾಣುತ್ತೇವೆ,
ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಒಂದು ಸಾಗರದಲ್ಲಿ ಅಮೃತಕ್ಕಾಗಿ ದೇವತೆಗಳು ಹಾಗೂ ಅಸುರರು ಸೇರಿ ಒಟ್ಟಿನಲ್ಲಿ ಕಾರ್ಯ ಮಾಡಿದರು ಇದಕ್ಕೆ ಸಮುದ್ರ ಮಂಥನ ಎಂದು ಸಹ ಕರೆಯುವರು ಇವರು ಮಂಥನ ಮಾಡುವಾಗ ಅದರಲ್ಲಿ ಒಳ್ಳೆಯದು ಒಂದು ಭಾಗವಾದರೆ ಕೆಟ್ಟದ್ದು ವಿಷ ಒಂದು ಭಾಗವಾಯಿತು ಅವಾಗ ಎಲ್ಲ ದೇವತೆಗಳು ಸೇರಿ ಶಿವನ ಬಳಿ ಕಾಪಾಡು ಎಂದು ವಿಜ್ಞಾಪಿಸಿದಾಗ ಶಿವನು ಬಂದು ವಿಷ ಸೇವಿಸಿದನು, ಇದನ್ನು ನೋಡಿದ ಪತ್ನಿ ಪಾರ್ವತಿಯು ಬಂದು ಆ ವಿಷವನ್ನು ಕೆಳಗೆ ಇಳಿಯದಂತೆ ಶಿವನ ಗಂಟಲಿನಲ್ಲಿಯೇ ನಿಲ್ಲುವ ಹಾಗೆ ಹಿಡಿದಳು ಅವಾಗ ಅದು ನೀಲಿ ವರ್ಣವಾಯಿತು ಅದಕ್ಕೆ ಶಿವನನ್ನು “ನೀಲಕಂಠ” ಎಂದು ಕೂಡಾ ಕರೆಯಲಾಗುತ್ತದೆ, ಅದಕ್ಕಾಗಿಯೇ ಜನರು ಶ್ರಾವಣ ಮಾಸದಲ್ಲಿ ಶಿವಪಾರ್ವತಿ ಯರನ್ನು ಪೂಜಿಸಿದರೆ ಇಚ್ಚಿತ ಫಲ ಈಡೇರುವವು ಎಂಬುವಂತವನ್ನು ಪುರಾಣ, ಉಪನಿಷತ್ತುಗಳಿಂದ ಕೇಳಲ್ಪಡುತ್ತೇವೆ, ಒಟ್ಟಾರೆ ಈ ಶ್ರಾವಣ ಮಾಸದಲ್ಲಿ ನಾವೆಲ್ಲರೂ ಶ್ರವಣ, ಮನನ, ನಿಧಿದ್ಯಾಸವನ್ನು ಮಾಡಿ ಶಿವಕೃಪೆಗೆ ಪಾತ್ರರಾಗೋಣ.

ಲೇಖನ:ನಾಗಲಿಂಗಯ್ಯ ಸ್ಥಾವರಮಠ,
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ
ಶರಣಬಸವ ವಿಶ್ವವಿದ್ಯಾಲಯ,ಕಲಬುರಗಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ