ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ವಾರ್ಡ್ ನಂಬರ್ ಎರಡರಲ್ಲಿ ಇರುವ ಅಂಗನವಾಡಿ ಕೇಂದ್ರ ಸುತ್ತಲೂ ಕಸ,ಕಲ್ಲು,ಹೊಲಸಿನಿಂದ ಕೂಡಿರುವುದರಿಂದ, ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಓಡಾಡಲು ಬಹಳ ತೊಂದರೆ ಅನುಭವಿಸುತ್ತಿದ್ದು ಮತ್ತು ಸ್ವಚ್ಚತೆ ಇಲ್ಲದ ಕಾರಣದಿಂದ ಮಕ್ಕಳಿಗೆ ಮಲೇರಿಯಾ, ಟೈಫೈಡ್ ಮತ್ತು ಡೆಂಗ್ಯೂ ಜ್ವರ ಹರಡುತ್ತಿರುವುದನ್ನು ಗ್ರಾಮ ಪಂಚಾಯಿತಿಗೆ ಗಮನಕ್ಕೆ ತಂದು ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸದಿದ್ದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ವಡಗೇರಾ ತಾಲೂಕು ಅಧ್ಯಕ್ಷ ವಿದ್ಯಾದರ್ ಬಿ ಜಾಕಾ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಶಿವರಾಜ ಸಾಹುಕಾರ್, ವಡಗೇರಾ