ವಿಜಯಪುರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅಂಗಡಿಗಳ ಬಗ್ಗೆ ಅರ್ಜಿ ಸಲ್ಲಿಸದ ಹಿನ್ನೆಲೆ ಏಳು ಅಂಗಡಿಗಳಿಗೆ ನೋಟಿಸ್ ನೀಡಿ ಅಂಗಡಿ ಸೀಜ್ ಮಾಡಲಾಗಿರುವ ಘಟನೆ ವಿಜಯಪುರ ನಗರದ ಬಾರಾಕಮಾನ್ ಬಳಿ ನಡೆದಿದೆ.ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಆದೇಶ ಹಿನ್ನೆಲೆ ಸೀನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಪ್ರವೀಣ ಕಂಬಳಿ ನೇತೃತ್ವದ ತಂಡದವರು ಏಳು ಅಂಗಡಿಗಳ ಮೇಲೆ ದಾಳಿಗೈದು ಸೀಜ್ ಮಾಡಿದ್ದಾರೆ.ಅದಕ್ಕಾಗಿ ತಕ್ಷಣವೇ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
ವರದಿ : ಮಹ್ಮದ ನಾಸೀರ ಇನಾಮದಾರ