ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ದಿನಾಂಕ 4-09-2024 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದುದಾರರಾದ ಜಿ.ಸಿಧ್ದಪ್ಪ ತಂದೆ ಸಿದ್ದಲಿಂಗಪ್ಪ 44 ವರ್ಷ ಲಿಂಗಾಯತರ ಜನಾಂಗ ಕೂಲಿ ಕೆಲಸ ವಾಸ ಮುದಕನಕಟ್ಟೆ ಕೊಟ್ಟೂರುರವರು ಪೋಲಿಸ್ ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಂಶವೇನೆಂದರೆ ಪಿರ್ಯಾದಾರರ ನನ್ನ ತಮ್ಮ ಮಂಜುನಾಥ ಈತನು ವಿಪರೀತ ಮದ್ಯ ಸೇವನೆ ಮಾಡುವ ಅಬ್ಯಾಸ ಮಾಡಿಕೊಂಡು ತಾನು ಹೋಟಲ್ ಕೆಲಸ ಮಾಡಿ ಬಂದ ಹಣವನ್ನೆಲ್ಲಾ ಖರ್ಚು ಮಾಡುತ್ತಿದ್ದು ಇದರಿಂದ ಬೆಂಗಳೂರಿನಲ್ಲಿ ತನ್ನ ಸಂಸಾರ ನಡೆಸಲು ಕಷ್ಟವಾಗಿದ್ದರಿಂದ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 2-09-2024 ರಂದು ಸಾಯಂಕಾಲ 4-30 ಗಂಟೆಯಿಂದ ದಿನಾಂಕ 4- 9-2024 ರ ಬೆಳಿಗ್ಗೆ 8-00 ಗಂಟೆಯ ಮದ್ಯದ ಅವಧಿಯಲ್ಲಿ ಕೊಟ್ಟೂರು ಕೆರೆಯ ನೀರಿನಲ್ಲಿ ಬಿದ್ದು ಅತ್ಮಹತ್ಯೆ ಮಾಡಿಕೊಂಡಿರುತ್ತಾನೆಯೇ ವಿನಃ ನನ್ನ ತಮ್ಮನ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ರೀತಿಯ ಅನುಮಾನ ಇರುವುದಿಲ್ಲ ಎಂದು ಮುಂದಿನ ಕ್ರಮ ಜರುಗಿಸಲು ನೀಡಿದ ದೂರಿನ ಸಾರಾಂಶದ ಮೇರೆಗೆ ಕೊಟ್ಟೂರು ಪೋಲಿಸ್ ಠಾಣೆಯಲ್ಲಿ ದಿನಾಂಕ 4-09-2024 ರಂದು ಪಿ ಎಸ್ ಐ ಗೀತಾಂಜಲಿ ಶಿಂಧೆ ರವರು ಮತ್ತು ಶ್ರೀ ಕೆ ಚಂದ್ರಶೇಖರ ಎ .ಎಸ್. ಐ .ರವರು ಮತ್ತು ಪೋಲಿಸ್ ಸಿಬ್ಬಂದಿ 21/2024 ಕಲಂ: 194 ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.