ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ:ಡಾ ಸಿ ಬಿ ನಂದನ್

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲೂಕಿನ ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ದ೦ದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಬಾಗಲಕೋಟ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ ಸಿಬಿ ನಂದನ್ ಆಗಮಿಸಿ ಮಾತನಾಡಿ ಶಿಕ್ಷಕ ವೃತ್ತಿಯ ಮೌಲ್ಯವನ್ನು ಹೆಚ್ಚಸಿದ ಋಷಿ ಸದೃಶ ವ್ಯಕ್ತಿತ್ವದ ಚಿಂತನೆಯ, ಜ್ಞಾನದಾಹಿಗಳ ಆದಶ೯ ವ್ಯಕ್ತಿತ್ವ ಡಾ. ಸವ೯ಪಳ್ಳಿ ರಾಧಾಕೃಷ್ಣನ್ ಅವರನ್ನು ಸ್ಮರಿಸಿ ನಮಿಸಿ ಶಿಕ್ಷಕ ವೃತ್ತಿಯ ಮೌಲ್ಯಗಳ ಕುರಿತು ಮಾತನಾಡಿದರಲ್ಲದೆ ತಂದೆ ತಾಯಿಯ ಹಾಗೂ ಗುರುವಿನ ಋಣಾತ್ಮಕ ಸಂಬಂಧ ಸಮಾಜದಲ್ಲಿ ಶ್ರೇಷ್ಠವಾದದ್ದು ಜೀವನದಲ್ಲಿ ಬರುವ ಪ್ರತಿಯೊಬ್ಬರೂ “ವರ್ಣಮಾತ್ರಂ ಕಲಿಸಿದಾತ ಗುರು “ಎಂದು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ಭೌತಿಕ ಸಂಸ್ಕಾರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು ಸಭೆಯ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾಕ್ಟರ್ ಜೆಜಿ ಬೈರಮಟ್ಟಿ ವಹಿಸಿದ್ದರು ಹಿರಿಯ ಉಪನ್ಯಾಸಕ ಸುರೇಶ ಎಸ್ ಆದಾಪುರ ಮಾತನಾಡಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ಮತ್ತು ಮೌಲ್ಯಗಳ ಕುರಿತು ಶಿಕ್ಷಣದಲ್ಲಿ ಇವತ್ತಿನ ಯುವಕರು ಅಳವಡಿಸಿಕೊಳ್ಳಬೇಕಾಗಿದೆ ಎಂದರಲ್ಲದೆ ಭವ್ಯ ಭಾರತದ ಭವಿಷ್ಯತ್ತಿನಲ್ಲಿ ವಿದ್ಯಾವಂತ ತತ್ವಜ್ಞಾನಿಗಳು ಸಮಾಜದ ಚಿಂತಕರು ಮೇಧಾವಿಗಳು ದೇಶವನ್ನು ಆಳಬೇಕು ಎಂದಾಗ ಮಾತ್ರ ದೇಶದ ಪ್ರಗತಿ ಪ್ರತಿಯೊಬ್ಬ ಸುಸಂಸ್ಕೃತ ನಾಗರಿಕರು ತಯಾರಾಗುತ್ತಾರೆ ಎಂದು ಅವರು ಹೇಳಿದರು ಈ ಸಭೆಯಲ್ಲಿ ಹಿರಿಯ ಉಪನ್ಯಾಸಕರಾದ ಬಿಬಿ ಬೇವೂರ ಡಾ ಎಸ್ ಬಿ , ಹ೦ಚನಾಳ, ಜಿಎಸ್ ಗೌಡರ, ಡಿ ವೈ ಬುಡ್ಡಿಯವರ ಡಾ ಆದಪ್ಪ ಗೊಡಚಕನವರ ಏನ್ ಬಿ ಬೆನ್ನೂರು ಆರ್ ವಿ ಕರಡಿಗುಡ್ಡ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು ಕುಮಾರಿ ಕಾವಳ್ಳಿ ಸ್ವಾಗತಿಸಿದರು ಹನುಮಂತ್ ಪೂಜಾರಿ ವಂದಿಸಿ, ಕುಮಾರಿ ಗೋಚಕ್ನನವರ ಪರಿಚಯಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ