ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳ ಬಂಧನ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪಿಯ ಬಗ್ಗೆ ಖಚಿತ ಮಾಹಿತಿ ಪಡೆದು ಶಿಕಾರಿಪುರದ ಹಣ್ಣಿನ ವ್ಯಾಪಾರಿ ಮುಭಾರಕ್ ಆಲಿಯಸ್ ಇಮ್ರಾನ್(26)ನನ್ನು ಹೊನ್ನಾಳಿ ಪೊಲೀಸ್ ಸುನಿಲಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಅಬಕಾರಿ ಡಿ ವೈ ಎಸ್ ಪಿ ಮುರುಡೇಶ್ವರ್ ಉಪಸ್ಥಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ಸುಮಾರು 4 ಗಂಟೆಗೆ ಶಿಕಾರಿಪುರದಿಂದ ಹೊನ್ನಾಳಿಗೆ ಗಾಂಜಾ ಮಾರಾಟ ಮಾಡಲು ಐಷಾರಾಮಿ ಕಾರಿನಲ್ಲಿ ಬಂಧಿದ್ದ ಆರೋಪಿ ಮುಬಾರಕ್ ನನ್ನು ಪೊಲೀಸ್ ಇನ್ಸ್ಪೆಕ್ಟರ್ ಸುನಿಲಕುಮಾರ್ ಪಟ್ಟಣದ ಎಪಿಎಂಸಿ ಸಮೀಪ ಕಾರನ್ನು ತಡೆದು ವಿಚಾರಣೆ ಮಾಡಿ ಕಾರನ್ನು ಪರಿಶೀಲಿಸಿದಾಗ 50 ಸಾವಿರ ಮೌಲ್ಯದ 498 ಗ್ರಾಂ ಗಾಂಜಾ ಸೊಪ್ಪು,ಬೀಜ,ಹೂವು ಹಾಗೂ ಮೊಗ್ಗನ್ನು ತನ್ನ ಟೀ ಶರ್ಟ್ ನಲ್ಲಿ ತುಂಬಿಕೊಂಡಿದ್ದನ್ನು ಅದನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ದಾಖಲು :ಗಾಂಜಾ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿಸಿರುವ ಆರೋಪಿ ಮುಬಾರಕ್ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಪೊಲಿಸ್ ಸಿಬ್ಬಂದಿಗಳಾದ ಜಗದೀಶ್,ರಾಜಶೇಖರ್,ಮಾಲತೇಶ್,ಮಲ್ಲೇಶ್,ಜಗದೀಶ್,ಮೌನೇಶ್,ಸುರೇಶ್ನಾಯ್ಕ್,ರವಿ ಇದ್ದರು.

ವರದಿ ಪ್ರಭಾಕರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ