ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಹಿ ಅಭಿಯಾನಕ್ಕೆ ಚಾಲನೆ

ಪಾವಗಡ : ಹಿಂದೂಗಳ ಉಳಿವಿಗಾಗಿ ಸಹಿ ಸಂಗ್ರಹದ ಅಭಿಯಾನಕ್ಕೆ ಸಮಸ್ತ ಹಿಂದೂಗಳು ಕೈ ಜೋಡಿಸಬೇಕು ಎಂದು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷರಾದ ಅನಿಲ್ ಯಾದವ್ ಅವರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಹಿ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಕಾಯ್ದೆಗಳನ್ನು ತಿದ್ದುಪಡಿ ಮಾಡಬೇಕೆಂದು ಸಂಸತ್ತಿನಲ್ಲಿ ಮಂಡನೆ ಮಾಡಿ ಚರ್ಚಿಸಲಾಯಿತು‌.ಈ ಸಂದರ್ಭದಲ್ಲಿ ಹಿಂದೂ ವಿರೋಧವಾದ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸಿನ ಬೆಂಬಲಿತ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಈ ವಿಚಾರವಾಗಿ ಪರ ಮತ್ತು ವಿರೋಧಗಳು ನಡೆಯುತ್ತಿದ್ದೆ ಹಾಗಾಗಿ ಕೇಂದ್ರ ಸರ್ಕಾರದಿಂದ ಜಂಟಿ ಸಂಸದೀಯ ಸಮಿತಿ ರಚನೆ ಮಾಡಿದ್ದೆ, ಈ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಮುಸ್ಲಿಮರು ಪ್ರತಿ ಮನೆಮನೆ ಹಾಗೂ ಮಸೀದಿಗಳಿಗೆ ತೆರಳಿ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿಂದೂಗಳು ಕೂಡಾ ಈ ಕಾಯ್ದೆಯ ಪರವಾಗಿ ವಾಕ್ ಬೋರ್ಡ್ ಸಂಬಂಧಪಟ್ಟಂತೆ 40 ತಿದ್ದುಪಡಿಗಳು ಆಗಬೇಕೆಂದು ಬೆಂಬಲ ವ್ಯಕ್ತಪಡಿಸಬೇಕಾಗಿದೆ.
ಈಗಾಗಲೇ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ವತಿಯಿಂದ ಬಾರ್‌ಕೋಡ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಅರಿದು ಬಿಡಲಾಗಿದ್ದು, ಈ ಬಾರ್ ಕೋಡ್ ಸ್ಕ್ಯಾನ್ ಮಾಡಿದ್ದಲ್ಲಿ ಕೇಂದ್ರ ಸರ್ಕಾರದ ಜಂಟಿ ಸಂಸದೀಯ ಸಮಿತಿಯ ಕಚೇರಿಗೆ ನೇರವಾಗಿ ಮೇಲ್ ಮಾಡುವ ಮುಖಾಂತರ ನಿಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಅದೇ ರೀತಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಜಿ ರವರು ಅವರ ಕರೆಯ ಮೇರೆಗೆ ಇಂದು ಪಾವಗಡ ಪ್ರವಾಸಿ ಮಂದಿರದಿಂದ ಸಹಿ ಸಂಗ್ರಹದ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು ಅದೇ ರೀತಿ ಮುಂದಿನ ದಿನಗಳಲ್ಲಿ ಹಿಂದುಗಳ ಮನೆ ಮನೆಗೆ ತೆರಳಿ ಸಹಿ ಸಂಗ್ರಹಣದ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು.

ಎಲ್ಲ ಹಿಂದೂಗಳು ಸಹಿಯ ಮೂಲಕ ನಿಮ್ಮ ಬೆಂಬಲವನ್ನು ವ್ಯಕ್ತಪಡಿಸಬೇಕು ಇಲ್ಲದಿದ್ದಲ್ಲಿ ಅಖಂಡ ಭಾರತವು ವಕ್ ಬೋರ್ಡಿನ ಪಾಲಾಗಲಿದೆ ಇದಕ್ಕೆ ಉದಾಹರಣೆ ಎಂಬಂತೆ ತಮಿಳುನಾಡಿನ ತಿರುಚೆಂದೂರೈನಲ್ಲಿ 1500 ವರ್ಷಗಳ ಹಳೆಯ ಹಿಂದು ದೇವಾಲಯವನ್ನು ಒಳಗೊಂಡಿರುವ ಸಂಪೂರ್ಣ ಹಿಂದು ಗ್ರಾಮವನ್ನು ವಕ್ ಬೋರ್ಡಿನ ಆಸ್ತಿ ಎಂದು ಘೋಷಿಸಲಾಗಿದೆ. ಈ ರೀತಿಯ ಹಲವಾರು ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಹೀಗಿದ್ದರೂ ಸಹ ರಾಜ್ಯ ಬಿಜೆಪಿ ನಾಯಕರು ಈ ವಿಚಾರವನ್ನು ಅರಿವು ಮೂಡಿಸದೆ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸ. ಇನ್ನಾದರೂ ಎಚ್ಚೆತ್ತುಕೊಂಡು ಬಿಜೆಪಿಯ ನಾಯಕರು ಹಿಂದೂಗಳಿಗೆ ಈ ವಿಷಯ ಮುಟ್ಟಿಸುವ ಕೆಲಸವನ್ನು ಮಾಡುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಮು, ಜಿಲ್ಲಾ ಖಜಾಂಜಿ ಜಿತೇಂದ್ರ ಬಾಬು, ಕಾರ್ತಿಕ್, ವಾಸು, ಸ್ವರೂಪ್, ರಾಜು, ನವೀನ್, ಮೂರ್ತಿ, ಮನೋಹರ್, ಪ್ರಭು, ನಿತಿನ್, ಬಾಬು, ಕುಮಾರ್, ದರ್ಶನ್ ಸೇರಿದಂತೆ ಇನ್ನೂ ಹಲವರು ಇದ್ದರು.

ವರದಿ: ಕೆ. ಮಾರುತಿ ಮುರಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ