ಕೊಪ್ಪಳ:ರಾಜ್ಯದ ಸಿಎಂ ಆಗಬೇಕು ಎಂದು ಹಲವರು ಆಸೆಪಡುತ್ತಿದ್ದಾರೆ. ಅವರು ಆಸೆ ಪಡುವುದರಲ್ಲಿ ತಪ್ಪೇನಿಲ್ಲ. ಆದರೆ, ಆ ಜಾಗ ಖಾಲಿಯಿಲ್ಲ ಒಂದು ವೇಳೆ ಬೇರೆಯವರನ್ನು ಮುಖ್ಯಮಂತ್ರಿ ಮಾಡುವುದಾದರೆ ನಾನು ಆಕಾಂಕ್ಷಿ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಾತನಾಡಿದ ಅವರು ಸಿಎಂ ಕುರ್ಚಿ ಖಾಲಿ ಎಲ್ಲಿದೆ? ನನ್ನ ಪ್ರಕಾರ ಸಿಎಂ ಸಿದ್ದರಾಮಯ್ಯ ಉಳಿದ ಅವಧಿಗೂ ಮುಂದುವರೆಯಲಿದ್ದಾರೆ. ಅವರು ಸಿಎಂ ಆಗಿ ಮುಂದುವರೆಯುವುದರಲ್ಲಿ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎನ್ನುವ ಕಾರಣಕ್ಕಾಗಿ ನಾನು ಸಿಎಂ ಪರ ಮಾತನಾಡುತ್ತಿರುವೆ ಎಂದರು.
ಇದು ನನ್ನ ವೈಯಕ್ತಿಕ ಅಭಿಲಾಷೆಯಾಗಿದೆ, ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿ.ಎಂ ಸ್ಥಾನ ನೀಡುವುದಾದರೆ ಹಾಗೂ ಲಿಂಗಾಯತ ಸಮುದಾಯಕ್ಕೆ ನೀಡುವುದಾದರೆ ನಾನು ಆಕಾಂಕ್ಷಿಯಾಗಿದ್ದೇನೆ ಎಂದರು.
ವರದಿ :ಬಸವರಾಜ ಕೆ ಕಳಸಪ್ಪನವರ