ಶಿವಮೊಗ್ಗ: ಮಾನವೀಯ ಹಾಗೂ ವೈಜ್ಞಾನಿಕ ನೆಲೆಯಲ್ಲಿ ಬೀದಿ ನಾಯಿಗಳ ಸಂತತಿಯನ್ನು ನಿಯಂತ್ರಣದಲ್ಲಿಡುವುದು.ಪ್ರಾಣಿ ಜನ್ಯ ರೋಗಗಳಾದ ರೇಬಿಸ್,ಲೆಪ್ಪೋಸ್ಪೈರಾ ಇತ್ಯಾದಿ ರೋಗಗಳಿಂದ ಜನ ಸಾಮಾನ್ಯರ ಆರೋಗ್ಯ ರಕ್ಷಣೆ ಮಾಡುವುದು ಇತ್ಯಾದಿ ಉದ್ದೇಶದಿಂದ ಇಂದು ರಾಜೀವ್ ಗಾಂಧಿ ಬಡಾವಣೆಯ ಮಹಾವೀರ್ ಗೋಶಾಲೆಯ ಪಕ್ಕದಲ್ಲಿ ನಡೆಸಲಾಗುತ್ತಿದ್ದ ಬೀದಿನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸಾ ಕೇಂದ್ರಕ್ಕೆ ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ.ಡಿ.ಎಸ್.ಅರುಣ್ ಅವರು ಭೇಟಿ ನೀಡಿ,ಚಿಕಿತ್ಸೆ ಕೇಂದ್ರಕ್ಕೆ ಅವಶ್ಯಕತೆವಿರುವ ಸೌಲಭ್ಯಗಳನ್ನು ಹಾಗೂ ಇಂತಹ ಮಾನವೀಯ ಕಾರ್ಯಕ್ಕೆ ಮತ್ತು ಉನ್ನತಿಕರಣಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಪಶು ವೈದ್ಯರಾದ ಶ್ರೀಮತಿ ರೇಖಾರವರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ