ಕಲ್ಬುರ್ಗಿ :ಕಾನಿಪಧ್ವನಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪಗಡೆ ಅವರನ್ನು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗೆ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು. ಸೋಮವಾರ ನಡೆದ ಕಾನಿಪ ಧ್ವನಿ ಕಲ್ಬುರ್ಗಿ ಜಿಲ್ಲಾ ಪತ್ರಕರ್ತರ ಬೃಹತ್ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮಾತನಾಡಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಗಡೆ ಅವರ ಸಂಘಟನಾ ಚಾತುರ್ಯ ಮತ್ತು ಅವರ ಕಾರ್ಯ ವೈಖರಿಯನ್ನ ಗಮನಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುವ ನಿರ್ಧಾರ ಮಾಡಿದ್ದೇನೆ ಇನ್ನು ಮುಂದೆ ಜಿಲ್ಲಾಧ್ಯಕ್ಷ ಹುದ್ದೆಯೊಂದಿಗೆ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷರನ್ನಾಗಿ ಅವರನ್ನು ನೇಮಕ ಮಾಡಿದ್ದೇನೆ ಈ ಭಾಗದಲ್ಲಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಕರೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪಗಡೆ “ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅವರು ನನ್ನ ಮೇಲೆ ಭರವಸೆ ಇಟ್ಟು ನೀಡಿದ ಜವಾಬ್ದಾರಿಯನ್ನು ಕರ್ತವ್ಯ ನಿಷ್ಠೆಯಿಂದ ಮಾಡುತ್ತೇನೆ” ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಪರಮಪೂಜ್ಯ ಹವಾ ಮಲ್ಲಿನಾಥ್ ಮಹಾರಾಜ್, ಜಿಡಗಾ ಶ್ರೀ ಮುರುಗರಾಜೇಂದ್ರ ಮಹಾಸ್ವಾಮಿಜಿ, ಮಳೆoದ್ರೆ ಮಹಾಸ್ವಾಮೀಜಿ, ವಾಗ್ಮಿ ನಿಕೇತನ್ ರಾಜ್ ಮೌರ್ಯ, ನಟ ಚೇತನ್, ಮಾಲಿಕಯ್ಯ ಗುತ್ತೇದಾರ್ ಮತ್ತು ಸಾವಿರಾರು ಪತ್ರಕರ್ತರು ಉಪಸ್ಥಿತರಿದ್ದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್(ಜೇವರ್ಗಿ)