ಶಿವಮೊಗ್ಗ :2024 – 25 ನೇ ಸಾಲಿನಲ್ಲಿ ನಡೆಯುವ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಸಹಯೋಗದಲ್ಲಿ ಆಯೋಜಿಸಿರುವ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ನೇರ ಜಿಲ್ಲಾಮಟ್ಟದ ಕ್ರೀಡಾ ಕೂಟದ ವಿವರ.
ಟೇಬಲ್ ಟೆನ್ನಿಸ್ : 22.09.2024ರಂದು ಭದ್ರಾವತಿ ತಾಲೂಕಿನ ಪೂರ್ಣಪ್ರಜ್ಞಾ ಶಾಲೆ, ಹುತ್ತ ಕಾಲೋನಿಯಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಸಲಾಗುವುದು.
ಷಟಲ್ ಬ್ಯಾಡ್ಮಿಂಟನ್ : ದಿನಾಂಕ :27.9.2024 ರಂದು ಭದ್ರಾವತಿ ಜಟ್ ಪಟ್ ನಗರ, ಹಳೆನಗರ ಭದ್ರಾವತಿಯ ಹೊಳಾಂಗಳ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ . ಇಲ್ಲಿ ಬೆಳಿಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ.
ಕ್ರಿಕೆಟ್ : ದಿನಾಂಕ: 30.09.2024ರಂದು ವಿ ಐ ಎಸ್ ಎಲ್ ಕ್ರೀಡಾಂಗಣ ಭದ್ರಾವತಿಯಲ್ಲಿ ಆಯೋಜಿಸಿದ್ದು,ಬೆಳಿಗ್ಗೆ 9 ಗಂಟೆಗೆ ವರದಿ ಮಾಡಿಕೊಳ್ಳಲು ತಿಳಿಸಿದೆ.
ಬಾಸ್ಕೆಟ್ ಬಾಲ್ : ದಿನಾಂಕ: 20.09.2024 ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ 14 ಮತ್ತು 17 ವರ್ಷ ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕಿಯರ ಬಾಸ್ಕೆಟ್ ಬಾಲ್ ಕ್ರೀಡಾಕೂಟವನ್ನು ಅಂದು ಬೆಳಿಗ್ಗೆ 9 ಗಂಟೆಗೆ ಆಯೋಜಿಸಲಾಗಿದ್ದು ಸಂಬಂಧ ಪಟ್ಟ ದೈಹಿಕ ಶಿಕ್ಷಣ ಶಿಕ್ಷಕರು ವರದಿ ಮಾಡಿಕೊಳ್ಳಲು ತಿಳಿಸಿದೆ.
ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬಾಲಕ ಮತ್ತು ಬಾಲಕಿಯರು ಅಂದು ಕ್ರೀಡೆ ನಡೆಯುವ ಸ್ಥಳಗಳಲ್ಲಿ, ಬೆಳಿಗ್ಗೆ 9 :30 ಗಂಟೆಯೊಳಗಾಗಿ ಇಲಾಖೆಯ ನಿಯಮಾನುಸಾರ ಅಗತ್ಯ ದಾಖಲೆಗಳೊಂದಿಗೆ ವರದಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ:
ಶ್ರೀ ಪ್ರಕಾಶ್ ಎಂ. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು,9448964356 ಮತ್ತು
ಶ್ರೀ ಶಿವಲಿಂಗೇಗೌಡ ,
ದೈಹಿಕ ಶಿಕ್ಷಣ ಶಿಕ್ಷಕರು, 99 02910362
ಮತ್ತು ರಾಮಚಂದ್ರಪ್ಪ ಹೆಚ್. ತಿಮ್ಮೇನಹಳ್ಳಿ ದೈಹಿಕ ಶಿಕ್ಷಣ ಶಿಕ್ಷಕರು ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಗುರುಪುರ,ಶಿವಮೊಗ್ಗ. 9880839575 ಇವರನ್ನು ಸಂಪರ್ಕಿಸಬಹುದು.
ವರದಿ :ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















