ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಸುಕ್ಷೇತ್ರ ನಗನೂರು ಗ್ರಾಮದ ಶ್ರೀ ಸುಗೂರೇಶ್ವರ ಶಿವಾಚಾರ್ಯ ಜಾತ್ರಾ ಮಹೋತ್ಸವ ಅಂಗವಾಗಿ ಧರ್ಮಸಭೆ ಹಾಗೂ ಲಕ್ಷ ದೀಪೋತ್ಸವ ಬಹಳ ಅದ್ದೂರಿಯಾಗಿ ಜರಗಿತು.
ಪ್ರತಿ ವರ್ಷದಂತೆ ಈ ವರ್ಷ ಕೂಡ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಸಾಧಕರಿಗೆ ಪ್ರತಿಭಾ ಪುರಸ್ಕಾರ ಹಾಗೂ ಗೌರವ ಸಮರ್ಪಣೆ ಮಾಡಲಾಯಿತು.
ಹಾಗೂ ಪೂಜ್ಯ ಶ್ರೀ ಗಳ ತುಲಾಭಾರ ಮಾಡುವ ಮೂಲಕ ಮುತ್ತೈದೆಯರಿಗೆ ಉಡಿತುಂಬುವುದು ಹಾಗೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಮತ್ತು ಬಸವರಾಜ ಮಹಾಮುನಿ ಅವರಿಂದ ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇದೆ ಸಂದರ್ಭದಲ್ಲಿ ನಗನೂರ ಗ್ರಾಮದ ಹಿರಿಯರ ಮುಖಂಡರು ಹಾಗೂ ಮಹಿಳೆಯರು ಮಕ್ಕಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ,ಶಹಾಪುರ