ಯಾದಗಿರಿ: ರಾಜ್ಯದ ಅರ್ಹ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಯೋಜನೆ ಜಾರಿಗೆ ಕೊನೆಗೂ ಅಂತಿಮ ಮುದ್ರೆ ಒತ್ತಿ ದಶಕಗಳ ಬೇಡಿಕೆಗೆ ಸ್ಪಂದನೆ ನೀಡಿದ ರಾಜ್ಯ ಸರಕಾರದ ನಡೆ ಸ್ವಾಗತಾರ್ಹ ಎಂದು ಕಾರ್ಯನಿರತ ಪತ್ರಕರ್ತರ ಸಂಘ ಯಾದಗಿರಿ ಮಾಜಿ ಜಿಲ್ಲಾಧ್ಯಕ್ಷ ಇಂದುಧರ ಸಿನ್ನೂರ ತಿಳಿಸಿದ್ದಾರೆ.
ಈ ಕುರಿತು ” ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಆಡ್- ದೇಶ ಹೊರಬಿದ್ದಿದ್ದು, ಪ್ರಣಾಳಿಕೆಯಲ್ಲಿ ಕೊಟ್ಟಂತೆ ನುಡಿದಂತೆ ನಡೆದ ಸಿಎಂ ಸಿದ್ದರಾಮಯ್ಯ ಅವರಿಗೂ ಧನ್ಯವಾದ ಅರ್ಪಿಸಿ, ಸಂತಸ ವ್ಯಕ್ತಪಡಿಸಿದ್ದಾರೆ. ಇದು ಸಾಕಾರಗೊಳ್ಳಲು ಕಾರಣೀಭೂತರಾದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಶಿವರಾಜ ಸಾಹುಕಾರ್, ವಡಗೇರಾ