ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಲೆನಾಡ ಚೆಲುವ

ಮಲೆನಾಡ ಚೆಲುವ
ಮಲೆನಾಡಿನ ಸುಂದರ
ಆಡಂಬರವಿಲ್ಲದ ಹುಡುಗ.
ಆ ಕ್ಷಣ ನೋಡುತ ನಿನ್ನ
ನಾ ಮರೆತೆನು ನನ್ನ

ಹಚ್ಚ ಹಸಿರು ಕಾನನದ ಮಡಿಲು
ನೀನು ಜನಿಸಿದ ಸಿರಿ ಒಡಲು
ಶುದ್ಧನೀರಿನ ನದಿಗಳ ಮಧ್ಯ
ಸ್ವಚ್ಛ ಮನಸ್ಸಿನ ನಮ್ಮ
ಇಬ್ಬರ ಪ್ರತಿಬಂಬಗಳು
ನಮ್ಮ ಇಬ್ಬರ ಪ್ರೀತಿಗೆ ಸಾಕ್ಷಿ
ಪಶ್ಚಿಮ ಘಟ್ಟಗಳ ಸಾಲು

ತಂಪೆರೆವ ಗಾಳಿಗೆ
ಇಂಪಾದ ಹಕ್ಕಿಗಳ ಹಾಡು
ನಮ್ಮ ಇಬ್ಬರಿಗೆ ಅದುವೇ
ಪ್ರೇಮ ಸುಮಧುರ ಹಾಡು

ಅನುರಾಗದಿ ಹೂವೊಂದು
ಕಂಪೆಸೆಯುತ್ತಾ ಅರಳುತ್ತಿತ್ತು
ನಮ್ಮ ಇಬ್ಬರ ಮಧುರ
ಪ್ರೀತಿಯ ಸಂಗಮಕ್ಕೆ

-ರತ್ನಾ,ಹೊನ್ನನಾಯಕನಹಳ್ಳಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ