ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

“ನಿರ್ಮಲ ತುಂಗಾ-ಭದ್ರಾ : ನಮ್ಮೆಲ್ಲರ ಹಕ್ಕು ಹಾಗೂ ಕರ್ತವ್ಯ”

ಶಿವಮೊಗ್ಗ : ತುಂಗಾ-ಭದ್ರಾ ನದಿಗಳು ಸಾಮ್ರಾಜ್ಯಗಳ ಉಗಮ ಮತ್ತು ಪತನಕ್ಕೆ ಸಾಕ್ಷಿಯಾಗಿರುವ ಐತಿಹಾಸಿಕ ಪ್ರಾಮುಖ್ಯತೆಯ ನದಿಗಳು ಮಲೆನಾಡಿನ ಹಾಗೂ ಬಯಲು ಸೀಮೆಯ 5 ಜಿಲ್ಲೆಗಳಲ್ಲಿ ರೈತರೂ ಸೇರಿದಂತೆ ಸುಮಾರು ಒಂದು ಕೋಟಿ ನಾಗರಿಕರ ಜೀವ ನದಿಗಳಾಗಿ ಪರಿಗಣಿಸಲ್ಪಟ್ಟಿದೆ. ತುಂಗಾ-ಭದ್ರಾ ನದಿಗಳ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಹಾಗೂ ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆಯ ಕಿಷ್ಕಿಂದೆಯವೆರೆಗೂ ಹಮ್ಮಿಕೊಂಡಿರುವ ನಿರ್ಮಲ ತುಂಗಾ ಭದ್ರಾ ಅಭಿಯಾನ ಪಾದಯಾತ್ರೆಯು ಶಿವಮೊಗ್ಗ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ “ಬೃಹತ್ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಯುವ ಪೀಳಿಗೆಯೊಂದಿಗೆ ಪಾಲ್ಗೊಂಡು ಸ್ವಚ್ಛತೆ, ನೈರ್ಮಲ್ಯತೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮ ನದಿಗಳ ಪ್ರಾಮುಖ್ಯತೆಯ ಕುರಿತು ಅಭಿಪ್ರಾಯ ಹಂಚಿಕೊಳ್ಳಲಾಯಿತು.

ನಂತರ ನಡೆದ ಬೃಹತ್ ಜಾಥಾದಲ್ಲಿ ಕಾಲೇಜು ಮಕ್ಕಳೊಂದಿಗೆ ಹೆಜ್ಜೆ ಹಾಕುವ ಮೂಲಕ ಈ ಬೃಹತ್ ಪಾದಯಾತ್ರೆಗೆ ಕೈಜೋಡಿಸಲಾಯಿತು.
ಶ್ರೀಕ್ಷೇತ್ರ ಶೃಂಗೇರಿ ಬಳಿಯ ಗಂಗಡಿಕಲ್ಲು ಪ್ರದೇಶದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಶ್ರೀಕ್ಷೇತ್ರ ಕೂಡಲಿಯಲ್ಲಿ ಸಂಗಮವಾಗಿ ತುಂಗಾಭದ್ರಾ ನದಿಯಾಗಿ ಒಟ್ಟು ಸುಮಾರು 400 ಕಿ.ಮೀ. ಉದ್ದದಷ್ಟು ವಿಸ್ತಾರಗೊಂಡಿದೆ. ಪವಿತ್ರ ಜಲವನ್ನು ಸಂರಕ್ಷಿಸಿ ಮಲಿನ ಮುಕ್ತ ನದಿಯನ್ನಾಗಿ ಮಾಡುವ ಮೂಲಕ ಭವಿಷ್ಯದ ದಿನಗಳನ್ನು ರಕ್ಷಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ.
ಈ ಮಹಾನ್ ಕಾರ್ಯವು ಯಶಸ್ವಿಯಾಗಲು ಶ್ರಮಿಸಿದ ಶಿವಮೊಗ್ಗದ ಅನೇಕ ಸಂಘ- ಸಂಸ್ಥೆಗಳಿಗೆ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ ಪ್ರತಿಯೊಬ್ಬರಿಗೂ ಆತ್ಮೀಯವಾಗಿ ಧನ್ಯವಾದಿಸುತ್ತ, ಇದು ಕೇವಲ ಆರಂಭ ಮಾತ್ರ. ತುಂಗಾ-ಭದ್ರೆಯನ್ನು ಪ್ರತಿ ದಿನವೂ ಸಂರಕ್ಷಿಸುವ ಮೂಲಕ, ನಾವು ನಮ್ಮ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುತ್ತಾ ಸಾಗೋಣ ಎಂದು ಶಿವಮೊಗ್ಗ ಶಾಸಕ ಶ್ರೀ ಎಸ್ ಏನ್ ಚನ್ನಬಸಪ್ಪ ಅವರು ಕಾರ್ಯಕಾಮದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶ್ರೀ ಡಿ ಎಸ್ ಅರುಣ್, ಬೆಕ್ಕಿನ ಕಲ್ಮಠ ಸ್ವಾಮೀಜಿ ಶ್ರೀ ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ ಹಾಗೂ ಪರಿಸರವಾದಿ ಪ್ರೊ. ಬಿ. ಎಂ ಕುಮಾರಸ್ವಾಮಿ ಮತ್ತಿತರರು ಉಸ್ಥಿತರಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ