ಶಿವಮೊಗ್ಗ : ಇದೇ ತಿಂಗಳು ನಡೆದ ಕರ್ನಾಟಕ ರಾಜ್ಯದ ಶಿಗ್ಗಾವಿ ಸಂಡೂರ್ ಚಾಮರಾಜನಗರ ಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧರ್ಮದ ವಿರುದ್ಧ ಧರ್ಮದ ಭರ್ಜರಿ ಗೆಲುವು ಕಂಡಿದೆ, ಬಿಜೆಪಿ ನಾಯಕರ ಸತ್ಯಕ್ಕೆ ದೂರವಾದ ಹೇಳಿಕೆ ಮತ್ತು ನಡುವಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ವರವಾಗಿ ಪರಿಣಮಿಸಿದೆ, ಇನ್ನು ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಅಧಿಕಾರ ಗದ್ದುಗೆ ಗೇರಿ ಶಾಂತಿ ಮತ್ತು ನ್ಯಾಯ ಸಮ್ಮತವಾದ ಜನ ಸೇವೆ ಮಾಡಲು ರಾಜ್ಯದ ಜನ ಮುನ್ನುಡಿ ಬರೆದಿದ್ದಾರೆ, ಈ ಜನ ಆಶೀರ್ವಾದದಿಂದ ನಮ್ಮ ಎಲ್ಲಾ ನಾಯಕರು ಹಾಗೂ ಮುಖಂಡರಿಗೆ ಆನೆ ಬಲಬಂದಂತಾಗಿದೆ, ಬಿಜೆಪಿ ನಾಯಕರು ಇಷ್ಟು ದಿನ ಮಾಡಿದ ಸುಳ್ಳು ಆರೋಪಗಳು ಮತ್ತು ನಡವಳಿಕೆಗಳಿಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಇದರಿಂದ ಬಿಜೆಪಿ ಪಕ್ಷವು ರಾಜ್ಯದಲ್ಲಿ ಅಂಚದ ಅಂತ್ಯದ ಅಂಚಿನಲ್ಲಿರುವುದು ಕೆ ಸಾಕ್ಷಿಯಾಗಿದೆ, ಸರ್ವೇ ಜನ ಸುಖಿನೋ ಭವಂತು, ಸತ್ಯಮೇವ ಜಯತೆ ಎಂಬ ತತ್ವದೊಂದಿಗೆ ಅಧಿಕಾರ ನಡೆಸಿ ಪ್ರತಿಯೊಬ್ಬ ರಾಜ್ಯದ ಜನತೆಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಶ್ರಮಿಸಲಿದ್ದು ಮುಂದಿನ ದಿನಗಳಲ್ಲಿ ಹೊಸ ಹೊಸ ಕಾರ್ಯಕ್ರಮದೊಂದಿಗೆ ಜನಸೇವೆ ಮಾಡಲು ಆಶೀರ್ವದಿಸಿದ ಎಲ್ಲಾ ಜನತೆಗೂ ಹಾಗೂ ರಾಜ್ಯವನ್ನು ಅಚ್ಚುಕಟ್ಟಾಗಿ ಮುನ್ನಡೆಸುತ್ತಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಅಭಿನಂದಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ