ಲೋಕದ ಕಣ್ಣಿಗೆ ಕಾಣುವ
ಮುನ್ನುಡಿ ನಿನಾಗಲಾರೆ ಆದರೂ,
ಒಳಗಣ್ಣಿಗೇಕೊ
ನನ್ನದೆ ಲೋಕದಲಿ ನಿನ್ನ ಚಹರೆಯ
ಕಾಪಿಡುವ ಆಸೆ
ಬಾಳಿಗೊಂದು ಮುನ್ನುಡಿ
ಬರೆಯುವ ಹೊತ್ತಿಗಾಗಲೇ
ಬೆನ್ನುಡಿಯ ಮಿತಿ ತಲುಪಿರುವೆ
ಇನ್ನು ಮುನ್ನುಡಿಯ
ಬರೆಯಲು ಹೇಗೆ ತಾನೇ ಸಾಧ್ಯ
ಸಾಧ್ಯ ಸಾಧ್ಯತೆಗಳ
ಪ್ರಶ್ನಿಸುವ ಒಳಗಣ್ಣಿಗೆ
ಮುನ್ನುಡಿ ಬರೆಸುವ
ಭರವಸೆಯ ಕೊಡಲಾರೆ ಆದರೆ,
ಮುನ್ನುಡಿಯ ಮರೆಯಲಿರಿಸುವೆ
ಬೆನ್ನುಡಿಯನ್ನಾದರೂ
ಬರೆಸಹುದೇ ಎಂಬ
ಮನದ ಅಳಲನ್ನು
ಕೇಳಲಾರದ ಒಳಗಣ್ಣು
ಎಲ್ಲವನ್ನೂ ತಿರಸ್ಕರಿಸಿ
ರಚನೆ:ಲೋಹಿತೇಶ್ವರಿ ಎಸ್ ಪಿ