ಹನೂರು :ವಿಧಾನಸಭಾ ಕ್ಷೇತ್ರದಲ್ಲಿ ಬಿ ಜೆ ಪಿ ಯವರ ಸ್ವಪಕ್ಷದವರಲ್ಲೆ ಭುಗಿಲೆದ್ದ ಬಣ ರಾಜಕೀಯದ ದೊಂಬರಾಟಕ್ಕೆ ಸಾಕ್ಷಿಯಾದ ಹನೂರು ವಿಧಾನಸಭಾ ಕ್ಷೇತ್ರ . ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವರಿಷ್ಠರ ಆದೇಶದಂತೆ ಬೂತ್ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಪ್ರತಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಓರ್ವತಂತೆ ಮೇಲ್ವಿಚಾರಣೆ ಜವಾಬ್ದಾರಿಯನ್ನು ವರಿಷ್ಠರು ಆದೇಶಿಸಿದರು ಎಂದು ನಿಶಾಂತ್ ಎಂಬುವವರು ಹೇಳಿದ ಸಂದರ್ಭದಲ್ಲಿ ಬಿ ಜೆ ಪಿ ಕಾರ್ಯಕರ್ತರು ತಮಗೆ ಜವಾಬ್ದಾರಿ ನೀಡಿದವರು ಯಾರು ಒಂದು ವೇಳೆ ನೀಡಿದ್ದರೆ ಅದರ ಆದೇಶ ಪ್ರತಿಯನ್ನು ನಮಗೆ ನೀಡಿ ಇಲ್ಲವೇ ಕ್ಷೇತ್ರ ಬಿಟ್ಟು ತೊಲಗಿ ನೀವು ನಮ್ಮ ಕ್ಷೇತ್ರದ ಮತದಾರರೇ? ನಮ್ಮ ಕ್ಷೇತ್ರಕ್ಕೂ ನಿಮಗೂ ಏನು ಸಂಬಂಧ ನಮ್ಮ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣ ನೀವೆ ಮೊದಲು ಕ್ಷೇತ್ರ ಬಿಟ್ಟು ತೊಲಗಿ ಇಲ್ಲದಿದ್ದ ಪಕ್ಷದಲ್ಲಿ ವರಿಷ್ಠರ ಮುಂದೆ ನಿಮ್ಮ ವಿರುದ್ದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಪ್ರಸಂಗವು ಜರುಗಿತು ಇದೇ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯಕರ್ತರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.