ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿಸ್ತು- ಸಮಯ ಪಾಲನೆಗೆ ಸೈ ಎನಿಸಿಕೊಂಡು 35 ವರ್ಷಗಳ ಸೇವೆಯಲ್ಲಿ ಶಿಕ್ಷಕರಾಗಿ ಶೈಕ್ಷಣಿಕ ಪ್ರಗತಿಗೆ ಅವಿರತ ಶ್ರಮ ಶ್ಲಾಘನೀಯ

ಬಳ್ಳಾರಿ / ಕಂಪ್ಲಿ : ಗುರು ಎನ್ನುವುದು ಬರಿ ಪದವಲ್ಲ ಅದೊಂದು ಶಕ್ತಿ ಹಾಗೂ ಜೀವನ ನೀಡಿದವರು ತಂದೆ ತಾಯಿಗಳಾದರೆ ಬದುಕು ರೂಪಿಸುವುದು ಗುರು ಎನ್ನುವುದು ಅಕ್ಷರಶಃ ಸತ್ಯ ಆಡಿ ಬೆಳೆಯುವ ಮನೆ ಅಂಗಳದಿಂದಲೇ ಪ್ರಾರಂಭವಾದ ಜೀವನದ ಕಲಿಕೆ ಪ್ರತಿಕ್ಷಣವೂ ವಿದ್ಯಾರ್ಥಿಗಳಾಗಿ ಜ್ಞಾನವನ್ನು ಪಡೆಯಲು ಸವಾಲುಗಳನ್ನು ಸಮಾಜದಲ್ಲಿ ಸ್ವೀಕರಿಸಬೇಕಾಗುತ್ತದೆ. ಅದರಲ್ಲೂ ಮೌಲ್ಯವರ್ದಿತ ಮತ್ತು ನೈತಿಕ, ಮಾನವೀಯ ಶಿಕ್ಷಣದ ಮೂಲಕ ಬದುಕು ರೂಪಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಇರುತ್ತದೆ ಬೋಧನಾ ವೃತ್ತಿ ಎಂದರೆ ಅದು ಪವಿತ್ರ ನವ ಸಮಾಜವನ್ನು ಕಟ್ಟುವ ಮತ್ತು ಸಮಾಜವನ್ನು ತಿದ್ದುವ ಸಾಮರ್ಥ್ಯ ಶಿಕ್ಷಕ ವೃತ್ತಿಗೆ ಮಾತ್ರ ಇರುತ್ತದೆ ಡಿ. ಮಲ್ಲಿಕಾರ್ಜುನ ಗುರುಗಳು ಹೀಗೆ 35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸರಳತೆ ,ಶ್ರದ್ಧೆ, ಶಿಸ್ತು ಮತ್ತು ಸಮಯ ನಿರ್ಹವಣೆಗೆ ಹೆಸರಾದವರು ಹಾಗು ಗ್ರಾಮೀಣ ಪ್ರದೇಶದ ಕಡುಬಡತನದ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದವರು. ವಿದ್ಯಾರ್ಥಿಗಳು ಮೆಚ್ಚಿದ ಶಿಕ್ಷಕ ಡಿ. ಮಲ್ಲಿಕಾರ್ಜುನ ಆಗಿದ್ದರು.

ಬಾಲ್ಯದಲ್ಲಿ ಕಡುಬಡತನದ ಹಾಗೂ ಕುಗ್ರಾಮದಿಂದ ಕೃಷಿ ಕುಟುಂಬದಿಂದ ಶಿಕ್ಷಣ , ಸಂಸ್ಕಾರ ಪಡೆದವರು. ಧಾರ್ಮಿಕ ಪ್ರಸಿದ್ಧನಾಯಕನಹಟ್ಟಿ ಶ್ರೀ ತಿಪ್ಪೇಸ್ವಾಮಿ ದೇವರ ಹೇಳಿದಂತೆ “ಮಾಡಿದಷ್ಟು ನೀಡು ಭಿಕ್ಷೆ” ಎಂಬಂತೆ ಬಾಲ್ಯದಿಂದ ಓದು- ಬರಹ ಮನೆಯವರಿಗೆ ಸಹಾಯ ,ಸಣ್ಣಪುಟ್ಟ ಕೆಲಸಗಳನ್ನ ಅಚ್ಚುಕಟ್ಟಾಗಿ ಮಾಡಿ ಬಸವಣ್ಣನವರ ಕಾಯಕದ ತತ್ವದ ನಂಬಿದವರು ಆಡಿ ಬೆಳೆದು ದೊಡ್ಡವರಾದರು ಬಾಲ್ಯದಿಂದಲೇ ಅಚ್ಚುಮೆಚ್ಚಿನ ವೃತ್ತಿಯಾದ ಶಿಕ್ಷಕ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡರು.

ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರ ಸೇವೆ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಮತ್ತು ಅಭಿನಂದನಾ ಅರ್ಹವಾದದ್ದು ಇವರು ಮೂಲತಃ ಇಂದಿನ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರ ಗ್ರಾಮದವರು, ಇವರು ಓದಿನ ಜೊತೆಗೆ ಮನೆ, ಬದುಕು, ಜೀವನ ಕಟ್ಟಿಕೊಂಡಿದ್ದರು. ತಂದೆ ಡಿ. ಅಡವಿ ಹನುಮಪ್ಪ ತಾಯಿ ಸಕ್ರಮ್ಮ ಅವರ ಕರ ಸಂಜಾತರಾಗಿ 9ನೇ ಸೆಪ್ಟೆಂಬರ್ 1968 ರಂದು ಹುಟ್ಟಿದ ಇವರು ಇಂದು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಮೆಚ್ಚಿದ” ಮಾದರಿ ಶಿಕ್ಷಕರು “ಎನಿಸಿಕೊಂಡಿದ್ದಾರೆ.

ಜನರ ಪ್ರೀತಿ ಗೆದ್ದ ಮಕ್ಕಳ ನೆಚ್ಚಿನ ಶಿಕ್ಷಕ :

ಬಾಲ್ಯದಿಂದಲೇ ಪುಸ್ತಕ ಓದುವ ಗೀಳು ಇವರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನ ಹುಟ್ಟೂರಾದ ಚೋರನೂರು ಸರ್ಕಾರಿ ಶಾಲೆಯಲ್ಲಿ ಮುಗಿಸಿ ಪಿಯುಸಿ ಹಾಗೂ ಪದವಿಯನ್ನು ಕೂಡ್ಲಿಗಿಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ
ನಂತರ ಶಿಕ್ಷಕರಾಗುವ ಹಂಬಲದೊಂದಿಗೆ ಅಂದಿನ ಟೀಚರ್ಸ್ ಟ್ರೈನಿಂಗ್ ಕೋರ್ಸನ್ನು ಮುಗಿಸಿ 13ನೇ ಸೆಪ್ಟಂಬರ್ 1988 ರಂದು ಗೌರವ ಶಿಕ್ಷಕರಾಗಿ ಪ್ರಾರಂಭಿಸಿ 25 ಫೆಬ್ರವರಿ 1993 ರಂದು ಹೊಸ ನೆಲ್ಲುಡಿ ಗ್ರಾಮದಲ್ಲಿ ಸ. ಪ್ರಾ. ಶಾಲೆಯಲ್ಲಿ ಖಾಯಂ ಶಿಕ್ಷಕರಾಗಿ ವೃತ್ತಿಗೆ ಸೇರಿದರು. ಮುಖ್ಯವಾಗಿ ಎಮ್ಮಿಗನೂರು, ಸರ್ಕಾರಿ ಪ್ರೌಢಶಾಲೆಗೆ ನಿಯೋಜಿತ ಶಿಕ್ಷಕರಾಗಿ ಐದು ವರ್ಷ ಉತ್ತಮ ಬೋಧನೆಯನ್ನು ಮಾಡಿದರು. ಬಳ್ಳಾಪುರ, ಚಿಕ್ಕಜಾಯಗನೂರು, ನೆಲ್ಲೂಡಿ-ಕೊಟ್ಟಾಲ್, ಶಾಂತಿನಗರ, ಸೋಮಲಾಪುರ, ಕುರುಗೋಡು ವಿವಿಧ ಹಳ್ಳಿಗಳಿಗೆ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ವೈಯಕ್ತಿಕವಾಗಿ ಹಲವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿದ್ದಾರೆ. ಪ್ರಸ್ತುತ ಅನೇಕ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಮತ್ತು ಸೋಮಸಮುದ್ರ, ಬಳ್ಳಾರಿ ನಗರದ ಗಾಂಧಿನಗರ ಸೇರಿದಂತೆ ವಿವಿಧ ಹಳ್ಳಿ, ಊರು- ಗ್ರಾಮದ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು :
ಜನ ಮೆಚ್ಚಿದ ಶಿಕ್ಷಕ, ಜಿಲ್ಲಾ ಅತ್ಯುತ್ತಮ ಶಿಕ್ಷಕ, ಹಾಗೂ ಹೊಸ ನೆಲ್ಲುಡಿ ಶಾಲೆಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಇನ್ನು ಹಲವಾರು ಸಂಘ -ಸಂಸ್ಥೆಗಳಿಂದ , ಸಮುದಾಯಗಳಿಂದ ಹಲವು ಪ್ರಶಸ್ತಿ ಇವರಿಗೆ ಲಭಿಸಿದೆ.

ಹಲವಾರು ಕ್ಷೇತ್ರಗಳಲ್ಲಿ ಭಾಗಿ :
ಶಿಕ್ಷಕರ ಸಂಘದ ಪ್ರತಿನಿಧಿಯಾಗಿ, ಉಪಾಧ್ಯಕ್ಷರಾಗಿ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ, ಸರ್ಕಾರಿ ನೌಕರ ಸಂಘದ ಸದಸ್ಯರಾಗಿ, ಗೃಹ ನಿರ್ಮಾಣ ಸಂಘದ ನಿರ್ದೇಶಕರಾಗಿ ಕೂಡಾ ಸೇವೆ ನಿರ್ವಹಿಸಿದ್ದಾರೆ.

ಶೈಕ್ಷಣಿಕ ಅಭಿವೃದ್ಧಿ :
ಹೊಸ ನೆಲ್ಲುಡಿ, ಸೋಮಸಮುದ್ರ ಎಮ್ಮಿಗನೂರಿನ ತಳವಾರ ಪೇಟೆಯಲ್ಲಿರುವ ಶಾಲೆಗಳಲ್ಲಿ ಒಂದರಿಂದ ನಾಲ್ಕನೇ ತರಗತಿರುವ ಶಾಲೆಯನ್ನು ಉನ್ನತಿಕರಿಸಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಯನ್ನು ಕೂಡಾ ಮಂಜೂರು ಮಾಡಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಆಸೆಯಂತೆ ಪುಸ್ತಕಗಳು, ಪತ್ರಿಕೆಗಳು, ಗ್ರಂಥಾಲಯವೆಂದರೆ ಪಂಚಪ್ರಾಣ ಮುತ್ತು ಓದುವ ಹವ್ಯಾಸಗಳು ರೂಢಿಸಿಕೊಂಡಿದ್ದರು.

ಉತ್ತಮ ಪಾಠ ಬೋಧನೆಗಳೊಂದಿಗೆ ಪ್ರಾರಂಭವಾದ ಶಿಕ್ಷಕ ವೃತ್ತಿಯಲ್ಲಿ ಹಲವಾರು ಕಡೆ ಕೆಲಸ ಮಾಡಿ ಮಕ್ಕಳ ಪ್ರೀತಿ ಉತ್ತಮ ಫಲಿತಾಂಶದೊಂದಿಗೆ ಪಾಠಕ್ಕೂ ಹಾಗೂ ಸಂಘಟನೆಗೂ ಸೈ ಎನಿಸಿಕೊಂಡಿದ್ದಾರೆ. ಪ್ರಾಥಮಿಕ ಶಾಲೆಯ
ಮಕ್ಕಳ ನೆಚ್ಚಿನ ಗುರುಗಳಾಗಿ, ಮುಖ್ಯ ಗುರುಗಳಾಗಿ, ಮಾರ್ಗದರ್ಶಕರಾಗಿ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದ ಇವರಿಗೆ ನಮ್ಮದೊಂದು ಸಲಾಂ ಸಲಾಂ ಎನ್ನುತ್ತಾರೆ ಕಂಪ್ಲಿ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳು.
ಧಾರ್ಮಿಕ ,ಸಾಹಿತ್ಯ ,ಸಾಂಸ್ಕೃತಿಕ ಸಂಘಟಕ ಡಿ. ಮಲ್ಲಿಕಾರ್ಜುನ ಶಿಕ್ಷಕರಷ್ಟೇ ಅಲ್ಲದೆ ಸಂಘಜೀವಿ, ಬುದ್ಧಿಜೀವಿಗಳಾಗಿ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಸಮಾಜದ ಮತ್ತು ಶಿಕ್ಷಣ ಕ್ಷೇತ್ರದ ಪ್ರಗತಿಗೆ ದುಡಿದಿದ್ದಾರೆ .ಸದಾ ” ಶಿಕ್ಷಣ ಸಮಾಜ- ಸಂಘಟನೆ -ಸೇವೆಯಲ್ಲಿ” ನಿರತರಾಗಿದ್ದಾರೆ, ಧಾರ್ಮಿಕ ಮತ್ತು ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರದಲ್ಲೂ ಇವರ ಸೇವೆ ಸ್ಮರಣೀಯವಾಗಿದೆ. ಇವರ ಸೇವೆಯನ್ನ ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಗೌರವ ಸನ್ಮಾನಗಳು ನೀಡಿವೆ. ಶಿಕ್ಷಕ ಡಿ ಮಲ್ಲಿಕಾರ್ಜುನ ರವರ ಶಿಸ್ತು ಮತ್ತು ಸಮಯ ಪಾಲನೆಯಲ್ಲಿ ಇತರರಿಗೂ ಮಾದರಿಯಾಗಿದ್ದಾರೆ.

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಹೇಳುವಂತೆ ಪ್ರಪಂಚದ ಹಲವಾರು ವೃತ್ತಿಗಳಲ್ಲಿ ಶ್ರೇಷ್ಠ ವೃತ್ತಿ ಶಿಕ್ಷಕ ವೃತ್ತಿ, ಗುರುಗಳಿಂದ ಪಾಠ ಕೇಳಿದ ಶಿಷ್ಯರು ಉನ್ನತ ಸ್ಥಾನ ತಲುಪಿದಾಗ ಗುರುಗಳಲ್ಲಿ ಸಾರ್ಥಕ ಭಾವನೆ ಮೂಡುತ್ತದೆ.

ಪ್ರತಿದಿನವೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಚಿಂತಿಸಿದ ಇವರು ನೂರಾರು ವಿದ್ಯಾರ್ಥಿಗಳ ಹೃದಯ ಅಂತರಾಳದಿ ಪೂಜಿಸುವ ಗುರು ಆಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಇವರ ಸೇವೆ ಶ್ಲಾಘನೀಯವಾದದ್ದು ವೃತ್ತಿ ಬದುಕಿನೊಂದಿಗೆ ಶಿಕ್ಷಣ ಸಂಘಟನೆಯ ಮತ್ತು ಧಾರ್ಮಿಕ ಚಟುವಟಿಗಳ ಮೂಲಕ ಸಮಾಜದ ಏಳಿಗೆ ಬಯಸುವ ಡಿ. ಮಲ್ಲಿಕಾರ್ಜುನ ಅವರ ಅಕ್ಷರ ಪ್ರೇಮ ಸದಾ ಹೀಗೆಯೆ ಇರಲಿ.

ಡಿ. ಮಲ್ಲಿಕಾರ್ಜುನ ಗುರುಗಳು ನನ್ನ ಶೈಕ್ಷಣಿಕ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ, ಹಾಗೂ ಅವರು ಹಲವಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ, ಮಾರ್ಗದರ್ಶನ ನೀಡುವುದಲ್ಲದೆ, ಯುವ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸುತ್ತೇನೆ.

  • ನೆಚ್ಚಿನ ವಿದ್ಯಾರ್ಥಿ
    ಡಿ. ಎಸ್. ರಾಜಕುಮಾರ, (ಬಳ್ಳಾಪುರ ,ಕಂಪ್ಲಿ) ಇತಿಹಾಸ ಉಪನ್ಯಾಸಕರು, ಸ.ಪ. ಪೂ.ಕಾಲೇಜು, ಭಾಗ್ಯನಗರ ,ಕೊಪ್ಪಳ.

ವರದಿ : ಜಿಲಾನ್ ಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!