ಗಂಗಾವತಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ., ಮರಳಿ ಗ್ರಾಮದಲ್ಲಿ ದಿ. 08-05-2026 ರಂದು ಜರುಗಿದ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶ್ರೀ ದೊಡ್ಡನಗೌಡ ಕಂತೆಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀ ಮಾರೇಪ್ಪ ಅಂಬಣ್ಣ ಕುಂಟೋಜಿ, ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು, ಚುನಾವಣೆ ಅಧಿಕಾರಿಗಳಾದ, ಸುಧಾಬಾಯಿ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ., ಮರಳಿ ಹಾಗೂ ದ್ವಿ.ದ.ಸ.ಉ.ನಿ ಕಛೇರಿ ಕೊಪ್ಪಳ ಇವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯವರು, ಆಡಳಿತ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಗ್ರಾಮದ ಗುರು ಹಿರಿಯರು ಭಾಗಿಯಾಗಿದ್ದರು.




















