ಬೀದರ್:ಬಸವಕಲ್ಯಾಣದಲ್ಲಿ ಇದೇ ತಿಂಗಳ 11 ಮತ್ತು 12 ರಂದು ನಡೆಯಲಿರುವ ಬಸವ ಉತ್ಸವದ ಲೋಗೋ ಮತ್ತು ಪೋಸ್ಟರ್ ಗಳನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೀದರ ವಾಯುಪಡೆಯ ಸ್ವಾಗತ ಭವನದಲ್ಲಿ ಬಿಡುಗಡೆಗೊಳಿಸಿದರು.
ಬಸವ ಉತ್ಸವದಲ್ಲಿ ಸನ್ಮಾನ್ಯ ಮುಂಖ್ಯಮಂತ್ರಿಗಳು ಪಾಲ್ಗೊಳುವಂತೆ ಜಿಲ್ಲಾಡಳಿತದ ಮನಿವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮಾ12 ರಂದು ಬಸವ ಉತ್ಸವದಲ್ಲಿ ಪಾಲ್ಗೊಳ್ಳುವ ಭರವಸೆ ನಿಡಿದರು.
ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗಾರ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ, ಜಿಲ್ಲಾ ಪೋಲಿಸ ವರಿಷ್ಠ ಅಧಿಕಾರಿ ಚನ್ನಬಸವಣ್ಣ, ಸೂರ್ಯಕಾಂತಿ ನಾಗಮಾರಪಳ್ಳಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ:ಅಮರ ಮುಕ್ತೆದಾರ