ದೇವರಿಗೆ ಅರ್ಪಿಸಿದ ಸುಗಂಧರಾಜ ಪುಷ್ಪವು
ಬಾಡಿ ಬಸವಳಿದು ಮುದುಡಿತ್ತು ಮರುದಿನವು
ಬಿಸುಟುವ ಮುನ್ನ ಹಸಿರ ತೊಟ್ಟುಗಳ ಕತ್ತರಿಸಿದೆನು
ಸುಲಲಿತ ತೋಟದ ಅಂಗಳದಲಿ ಜೋಡಿಸಿದೆನು
ಹಾಸಿರುವೆ ಜೋಳದ ಬಂಗಾರದ ನೂಲನು
ಪೋಣಿಸಿರುವೆ ಗುಲಾಬಿಯ ದಳಗಳನು
ಏರಿಸಿರುವೆ ಮುಡಿಗೆ ಬೇಲಿಯ ಸುಂದರ ಹೂವನು
ಪಳೆಯುಳಿಕೆಗಳಿಂದ ಜೋಡಿಸಿರುವೆ ಪೀಠವನು
ಪಳೆಯುಳಿಕೆಯಲಿ ಮೂಡಿದ ಚಿತ್ತಾರವನು
ಬರೆದಿರುವ ಕಾವ್ಯದ ಕೆಲವು ಸಾಲುಗಳನು
ರವಾನಿಸುತಿರುವೆ ಸುಮಗಳಿಗೆ ಅಕ್ಷರಗಳ ಶುಭೋದಯವನು
- ಲಲಿತಾ ಕೆ ಆಚಾರ್, ಬೆಂಗಳೂರು



















