ಮುಗಿಲ ಮಾರುತ ಜಾರುತಿದೆ
ಬಿಡಿಗಾಳಿಯ ನೆತ್ತರು ಬಸಿದು
ನೆಲ ಬಿರಿದು ದಿಗಿಲು
ಬಣ ಗುಡುತಿದೆ ಒಕ್ಕಲು
ಆಹಾಕಾರದ ಬೇಗೆ
ದಿಕ್ಕು ತೋಚದ ಮಡಿಲು
ಬಿಕ್ಕುತಿದೆ ಸೊರಗಿ
ಕೊರಗುತಿಹ ಮಣ್ಣಿನ ಮಗ.
ತಾಪಮಾನದ ಏರಿಕೆ
ವಾಡಿಕೆ ಮಳೆ ಗರಿಕೆ
ಒಕ್ಕಳೆದಿದ್ದಿದೆ ಕುಟೀರ
ಗುಳೇ ಹೊರಟವರ ಗೋಳು ಕೇಳುವವರೇ.
ಅತಂತ್ರ ಬದುಕು
ಬೆಲೆ ಏರಿಕೆ ದಿನಮಾನ
ನೆಲೆಗಾಗಿ ಹೋರಾಟ ಹಾರಾಟ
ದೊಂಬರಾಟದ ಕೂಟ.
ಪರಿಸರ ಮಾಲೀನತೆಯ ಕೊಡುಗೆ
ಅಹಂನ ಪರಾಕಾಷ್ಟೆಯ ಉಡುಗೆ
ವರುಣನ ಕಣ್ಣಾಮುಚ್ಚಾಲೆ ಆಟಕೆ
ಧರಣಿಯ ಸೈರಣೆ ಕಟ್ಟೆ ಒಡೆದಿದೆ
ಒಣ ಬಣ ಬಣ
ಇಳೆಯ ಕಣ ಕಣ
ಮಳೆಯ ಚರಣ
ಕುಗ್ಗಿದ ಕಾರಣ.
- ರೇಷ್ಮಾ ಕಂದಕೂರ



















