ಅಬಕಾರಿ ಅಧಿಕಾರಿ ನಿರ್ಲಕ್ಷ್ಯವೇ ಜನರ ಆಕ್ರೋಶಕ್ಕೆ ಕಾರಣ
ಇಲ್ಲಿ ಹೇಳುವವರು ಕೇಳುವವರು ಯಾರೂ ಕೂಡಾ ಇಲ್ಲದಂತಾಗಿದೆ ಪ್ರತಿ ದಿನ ಸಂಜೆ ಆದರೆ ಸಾಕು ಕುಡುಕರದೆ ಸಾಮ್ರಾಜ್ಯ.
ಗದಗ ಜಿಲ್ಲೆಯ ರೋಣ ತಾಲೂಕು ಮುದೇನಗುಡಿ ಬಸ್ ನಿಲ್ದಾಣವನ್ನು ಸಾರ್ವಜನಿಕರಿಗೆ ಸರಕಾರ ಒದಗಿಸಿದ್ದರೂ ಅದು ಕುಡುಕರ ಪಾಲಾಗಿದೆ.
ಕುಡಿದ ಅಮಲಿನಲ್ಲಿ ಮದ್ಯದ ಬಾಟಲಿಗಳನ್ನು ಬೇಕಾಬಿಟ್ಟಿ ಬಿಸಾಡಿ ಹೋಗುತ್ತಾರೆ.
ಕುರಹಟ್ಟಿ ಗ್ರಾಮ ಪಂಚಾಯತಿಗೆ ಒಳಪಡುವ ಮುದೇನಗುಡಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಶಾಲಾ ಮಕ್ಕಳು, ಪಕ್ಕೀರಪ್ಪ ಮಾದರ ಸೇರಿದಂತೆ ಇನ್ನಿತರ ಗ್ರಾಮದ ದಲಿತ ಕಾಲೋನಿಯ ಸಂಘಟನೆಯವರು ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ.
ರೋಣ ಅಬಕಾರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಅಕ್ರಮ ಮದ್ಯ ಮಾರಾಟಕ್ಕೆ ಕಾರಣ, ಕೂಡಲೇ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು, ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ಉಗ್ರವಾದ ಹೋರಾಟಕ್ಕೆ ಸಿದ್ಧ ಎಂದು ಫಕೀರಪ್ಪ ಮಾದರ ಸೇರಿದಂತೆ ಇನ್ನೂ ಅನೇಕ ದಲಿತ ಸಂಘಟನೆಯವರು ತಿಳಿಸಿದ್ದಾರೆ.
ವರದಿ ಶರಣಪ್ಪಗೌಡ ಸಕ್ಕರಗೌಡರ




















