ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹೊಸ ಇತಿಹಾಸ ಸೃಷ್ಟಿಸಿದ ಹೊಸಳ್ಳಿ ಗ್ರಾ .ಪo. : ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ

ರೋಣ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯತಿಯಲ್ಲಿ ಯಾವುದೇ ಸೃಷ್ಟಿ ಗೊಂದಲ ಆಗದೆ ಅಧ್ಯಕ್ಷರಾಗಿ ಶೋಭಾ ಗೊಟಗೊಂಡ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಪ್ರವೀಣ ಬಸವರಡ್ಡೇರ ಅವಿರೋಧ ಆಯ್ಕೆಯಾದರು.

ಇದು ಒಂದು ಹೊಸಳ್ಳಿ ಗ್ರಾಮದ ಹೊಸ ಇತಿಹಾಸ ಸೃಷ್ಟಿಯಾಗಿ ರಾಜಕೀಯ ಭಿನ್ನಾಭಿಪ್ರಾಯಗಳಿಲ್ಲದೆ ಹೊಂದಿಕೊಂಡು ಎರಡನೇ ಅವಧಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿ ಗದಗ ಜಿಲ್ಲೆಯ ರೋಣ ತಾಲೂಕು ಹೊಸಳ್ಳಿ ಗ್ರಾಮ ಮಾದರಿಯಾಗಿದೆ ಈ ಅವಿರೋಧ ಆಯ್ಕೆಯಾದ ನೂತನ ಅಧ್ಯಕ್ಷರಾದ ಶೋಭಾ ಗೊತಗೊಂಡ ಹಾಗೂ ಉಪಾಧ್ಯಕ್ಷ ರಾಧಾ ಪ್ರವೀಣ ಬಸವರಡ್ಡೇರ ಅವರಿಗೆ ಹೊಸಳ್ಳಿ ಮತ್ತು ಜಿಗಳೂರು ಸದಸ್ಯರು ಗ್ರಾಮದ ಗುರುಹಿರಿಯರಿಂದ ಪದಾಧಿಕಾರಿಗಳಿಗೆ ಗೌರವ ಸನ್ಮಾನಮಾಡಿ ಗೌರವಿಸಿದರು.

ರೋಣ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಮಿಥುನ. ಜಿ. ಪಾಟೀಲ ಅವರಿಗೂ ಕೂಡ ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರ ಪರವಾಗಿ ಆತ್ಮೀಯ ಸನ್ಮಾನ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶಟರ ಅವರು ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ ನಮ್ಮ ಕಾಂಗ್ರೆಸ್ ಪಕ್ಷವು ಒಗ್ಗಟ್ಟಿನ ಪಕ್ಷವಾಗಿ ಇವತ್ತು ನಮ್ಮಕಾಂಗ್ರೆಸ್ ಪಕ್ಷವು ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರವಾಗಲಿ ಹಾಗೂ ಉಪಮುಖ್ಯಮಂತ್ರಿಗಳಾದ ಡಿ. ಕೆ .ಶಿವಕುಮಾರ ರವರಾಗಲಿ ನಮ್ಮಲ್ಲಿ ಭಿನ್ನಮತ ಇಲ್ಲದೆ ಒಗ್ಗಟ್ಟಿನ ಪಕ್ಷ ಎಂದು ಗುರುತಿಸಿಕೊಂಡಿದೆ,

ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮಿಥುನ್ ಜಿ. ಪಾಟೀಲ ಅವರು ಕೂಡ ಮಾತನಾಡಿ ರೋಣ ಮತಕ್ಷೇತ್ರದ ನಮ್ಮೆಲ್ಲ ಮತದಾರರು ಮತ್ತು ಅಭಿಮಾನಿಗಳು ಇವತ್ತು ರೋಣ ಮತಕ್ಷೇತ್ರದ ಜನನಾಯಕ ಶಾಸಕರಾದ ಸನ್ಮಾನ್ಯ ಜಿ. ಎಸ್. ಪಾಟೀಲ ಸಾಹೇಬರಿಗೆ ಒಗ್ಗಟ್ಟಿನಿಂದ ಸಚಿವ ಸ್ಥಾನಕ್ಕೆ ಎಲ್ಲಾ ಅಭಿಮಾನಿಗಳು ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಮನೆತನ ಚಿರಋಣಿಯಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ರೇಖಾ ಶರಣಪ್ಪ ಮಾದರ. ಶಾರದಾ ಬಿ ಅಂಗಡಿ. ಬಸಪ್ಪ ಕಲ್ಲಪ್ಪ ಮಾರಣಬಸರಿ. ಬಸಮ್ಮ ದೊಡ್ಡಬಸಯ್ಯ ಸ್ಥಾವರಮಠ. ಬಸವರಾಜ್ ಶಂಕ್ರಪ್ಪ ರೆಡ್ಡಾರ್. ಶ್ರೀಮತಿ ಲಲಿತಾ ಶರಣಪ್ಪ ಕುರಿ. ಶಿವಯೋಗಿ ಶಿವಲಿಂಗಪ್ಪ ಥಡಿ. ಅನ್ನಪೂರ್ಣ ಫಕೀರಪ್ಪ ಈರಗಾರ. ಸೇರಿದಂತೆ ಮಾಜಿ ಎ ಪಿ ಎಂ ಸಿ. ಅಧ್ಯಕ್ಷ ಪರಶುರಾಮ್ ಅಳಗವಾಡಿ. ನಿವೃತ್ತಿ ಕೃಷಿ ಅಧಿಕಾರಿ ಶಿವಪುತ್ರಪ್ಪ ದೊಡ್ಡಮನಿ. ಶರಣಪ್ಪ ಮಾದರ್. ದುರ್ಗಪ್ಪ ಮಾದರ್ ಗ್ರಾಮದ ಹಿರಿಯರು ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ನೂತನ ಪದಾಧಿಕಾರಿಗಳಿಗೆ ಗ್ರಾಮ ಪಂಚಾಯತಿ ಸಿಬ್ಬಂದಿ ಶುಭ ಹಾರೈಸಿದರು‌.

ವರದಿ ಶರಣಪ್ಪಗೌಡ ಸಕ್ಕರಗೌಡರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!