ಮೈಸೂರು: ವಾಹನ ದಟ್ಟಣೆ ನಡುವೆ ಬೇಸಿಗೆಯ ಬಿಸಿಲಿನಲ್ಲಿ ಕೆಲಸ ನಿರ್ವಹಿಸುವ,
ಮೈಸೂರಿನ ಟ್ರಾಫಿಕ್ ಪೊಲೀಸರಿಗೆ ವಿಶೇಷ ಸವಲತ್ತು ನೀಡಬೇಕೆಂದು “ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ” |ಶ್ರೀ ತೇಜಸ್ವಿ ನಾಗಲಿಂಗ ಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೇಸಿಗೆ ಕಾಲ ಶುರುವಾಗಿರುವುದರಿಂದ ಮೈಸೂರಿನಲ್ಲಿ ಅತೀ ಹೆಚ್ಚು ಬಿಸಿಲಿದೆ,
ನಗರದ ಪ್ರಮುಖ ವೃತ್ಯಗಳಲ್ಲಿ ಮತ್ತು ಇತರ ಕಡೆ ಗಳಲ್ಲಿ ಕಾರ್ಯನಿರ್ವಾಹಿಸುವ ಟ್ರಾಫಿಕ್ ಪೊಲೀಸರಿಗೆ ಬಹಳ ಕಷ್ಟವಾಗಿದೆ,
ಆದ ಕಾರಣ ಗೃಹ ಸಚಿವರು ಮತ್ತು ನಗರ ಪೋಲಿಸ್ ಆಯುಕ್ತರು
ಟ್ರಾಫಿಕ್ ಪೊಲೀಸರಿಗೆ ಬೇಸಿಗೆ ಮುಗಿಯುವವರೆಗೂ ಶುದ್ಧ ಕುಡಿಯುವ ನೀರು, ಮಾಸ್ಕ್, ಸೇರಿದಂತೆ
ವಿಶೇಷ ಸವಲತ್ತು ನೀಡಬೇಕೆಂದು ತೇಜಸ್ವಿ ಆಗ್ರಹಿಸಿದ್ದಾರೆ,