ಬಾಲ್ಯದಲ್ಲಿ ನಾವು ಆಡಿದ್ದೆ ಆಟ
ಮರಕೋತಿ,ಚಿಲ್ಲಿದಾಂಡು,ಗೋಲಿ ಆಟ
ಅಲ್ಲಲ್ಲಿ ಆಡುತ್ತಿದ್ದವು ಹುಡುಗಾಟ
ಇಂದು ಎಲ್ಲರೂ ಮಾಡುತ್ತಿದ್ದೇವೆ ನೆಮ್ಮದಿಯ ಹುಡುಕಾಟ
ಇಂದು ಭಗವಂತ ಆಡಿಸುತ್ತಾನೆ
ಬಣ್ಣವಿಲ್ಲದಂತೆ ಚಿತ್ರ ವಿಚಿತ್ರ ಆಟ
ಭಗವಂತ ನಿನಗಿದು ಹುಡುಗಾಟ
ನಮಗೆಲ್ಲಾ ಒಂಥರಾ ಪಿಕಲಾಟ
ಇದೆಲ್ಲಾ ನೀನೇ ಆಡಿಸುವ ಆಟ
ಸಮಯ ನೋಡಿ ಕಲಿಸುತ್ತಿಯ ಪಾಠ
ಅಳಿಸಿ ನೀನು ನಗುವುದು ನಿನಗೆ ಚೆಲ್ಲಾಟ
ಇದೇನಾ ಭಗವಂತ“ಬದುಕು”ಎನ್ನುವ ಓಟ
ಭಗವಂತ ನಮ್ಮ ಮೇಲಿರಲಿ
ನಿನ್ನ ಪ್ರೀತಿಯ ನೋಟ
ದಯವಿಟ್ಟು ಬಿಡಬೇಡ ನಿನ್ನ ವಕ್ರ ನೋಟ
ಬಡವರ ಮೇಲೆ ಬೇಡ ಭಗವಂತ
ನಿನ್ನ ಹುಡುಗಾಟ
-ವಿ,ಶ್ರೀನಿವಾಸ್,ವಾಣಿಗರಹಳ್ಳಿ,