ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊರಟಗೆರೆಯಲ್ಲಿ ಅದ್ದೂರಿಯಾಗಿ ಕೋಟೆ ಮಾರಮ್ಮ ಜಾತ್ರೋ ಮಹೋತ್ಸವ.

ತುಮಕೂರು ಜಿಲ್ಲೆಯ ಕೊರಟಗೆರೆಯ ರಕ್ಷಾ ದೇವತೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಿಯ ಜಾತ್ರಾ ಮಹೋತ್ಸವ ಆಷಾಡ ಮಾಸದ ಮೂರನೇ ವಾರ ಪ್ರತಿ ವರ್ಷವೂ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯುತ್ತದೆ.
ಕರ್ನಾಟಕದ ದಕ್ಷಿಣ ಕಾಶಿ ಎಂದು ಹೆಸರುವಾಸಿಯಾಗಿರುವ ಕೊರಟಗೆರೆಯ ಗಂಗಾಧರೇಶ್ವರ ಬೆಟ್ಟದ ಕೋಟೆಯ ರಕ್ಷಾ ದೇವತೆ ಗ್ರಾಮದೇವತೆ ಮಾರಮ್ಮ ದೇವಿಯ ಚರಿತ್ರೆಯು ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದು
ಜಾತ್ರಾ ಸಮಯದಲ್ಲಿ ಮೊದಲು ಗೌಡರ ಮನೆಯಿಂದ ವಾದ್ಯ ಮತ್ತು ಕಳಸ ಬಾನ ಜೊತೆಯಲ್ಲಿ ಅರ್ಚಕರ ಮನೆಗೆ ತರಲಾಗುತ್ತದೆ. ನಂತರ ಹೊಸ ಮಣ್ಣಿನ ದೇವರನ್ನು ಮನೆಯಿಂದ ಜಲದಿ ಗದ್ದಿಗೆಗೆ ತಂದು ಊರಿನ ಎಲ್ಲಾ ಪಂಗಡದವರೆಗೂ ಆಹ್ವಾನ ನೀಡಿ. ಜಾತ್ರೆಯನ್ನು ಮೂರು ದಿನಗಳ ಕಾಲ ನಡೆಸುತ್ತಾರೆ.

ಕೊರಟಗೆರೆಯ ಅಕ್ಕಪಕ್ಕದ 16 ಗ್ರಾಮಗಳಿಗೆ ಗ್ರಾಮದೇವತೆಯಾಗಿ ಸಾಂಕ್ರಾಮಿಕ ರೋಗಗಳು ಕೆಟ್ಟ ದೃಷ್ಟಿಯ ನಿವಾರಣೆಯ ತಾಯಿಯಾಗಿ ಕೊರಟಗೆರೆ ಕ್ಷೇತ್ರದಲ್ಲಿ ನೆಲೆ ನಿಂತಿದ್ದಾಳೆ.

ಗ್ರಾಮ ದೇವತೆಯ ಮಹತ್ವ :

ಶ್ರೀ ಕೋಟೆ ಮಾರಮ್ಮ ತಾಯಿಯ ಇತಿಹಾಸವು 800 ವರ್ಷಗಳ ಹಳೆಯದಾಗಿದ್ದು. ಮೈಸೂರನ್ನು ಆಳಿದ ಒಡೆಯರು ಒಮ್ಮೆ ಕೊರಟಗೆರೆ ಭೇಟಿ ನೀಡಿದ್ದಾಗ ಮಾರಮ್ಮ ತಾಯಿಯ ಮಹತ್ವ ಮತ್ತು ಶಕ್ತಿಯನ್ನು ಅರಿತು ಗ್ರಾಮ ದೇವತೆಯನ್ನು ನಮ್ಮ ಮೈಸೂರಿನ ಭಾಗದಲ್ಲಿ ದೊಡ್ಡ ದೇವಾಲಯವನ್ನು ನಿರ್ಮಿಸಿ ಪೂಜಿಸುವುದಾಗಿ ದೇವತೆಯನ್ನು ಕಳಿಸು ಕೊಡಿ ಎಂದು ಕೇಳಿದರು. ಆಗ ಪೂರ್ವಿಕರು ಒಪ್ಪಿಕೊಂಡಿರಲಿಲ್ಲ ಕಾರಣ ಈ ಗ್ರಾಮ ದೇವತೆಯು ಕೋಟೆಯ ರಕ್ಷ ದೇವತೆ ಮತ್ತು ಬುಡ ಕಟ್ಟು ಜನಾಂಗದವರು ಈ ಭಾಗದ ದಟ್ಟ ಅರಣ್ಯ ಪ್ರದೇಶಗಳು ಬೆಟ್ಟ ಗುಡ್ಡಗಳ ನಡುವೆ ವಾಸವಿದ್ದು ಸಾಂಕ್ರಾಮಿಕ ರೋಗಗಳಿಗೆ ದೇವತೆಯ ಮೊರೆ ಹೋಗುತ್ತಿದ್ದರು.
ನಾನು ಕಲ್ಲಿನ ರೂಪದಲ್ಲಿ ಇದ್ದೇನೆ ನನ್ನನ್ನು ಗ್ರಾಮಕ್ಕೆ ತಂದು ಪೂಜಿಸಿ ಮಣ್ಣಿನಿಂದ ಆಕೃತಿಯನ್ನು ನಿರ್ಮಿಸಿ ಪ್ರತಿಷ್ಠಾಪನೆ ಮಾಡಿ ಆಹ್ವಾನ ನೀಡಿದ ಕೋಟೆಯ ರಕ್ಷಾ ದೇವತೆ ಕೋಟೆ ಮಾರಮ್ಮ ಎಂದು ಪ್ರಸಿದ್ಧಿಯಾದಳು.
ಇಂದಿಗೂ ಪ್ರತಿ ವರ್ಷವೂ ಕೊರಟಗೆರೆಯ ಹೆಣ್ಣು ಮಕ್ಕಳು ತವರಿಗೆ ಬಂದು ಜಾತ್ರೆಯಲ್ಲಿ ಪಾಲ್ಗೊಂಡು ಗ್ರಾಮ ದೇವತೆ ದರ್ಶನ ಪಡೆದು ಬಾಗಿನದೊಂದಿಗೆ ಆಶೀರ್ವಾದಗಳನ್ನು ಪಡೆಯುತ್ತಾರೆ.

ಗ್ರಾಮ ದೇವತೆ ಶಕ್ತಿ ಅಪಾರ ಬೇಡಿದ ವರವ ನೀಡುವ ಶಕ್ತಿ ದೇವತೆಯ ಸುತ್ತು ಮುತ್ತಲಿನ ಎಲ್ಲರ ಕಷ್ಟಗಳನ್ನು ನೀಗಿಸಲಿ ಎಂದು ತಾಯಿಯಲ್ಲಿ ಪ್ರಾರ್ಥಿಸುವೆ ಎಂದು ಜಾತ್ರೆಗೆ ಆಗಮಿಸಿದ್ದ ಬೆಂಗಳೂರು ಮೂಲದ ಭವ್ಯರವರು ಹೇಳಿದರು.

ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!